ಪ್ರಮುಖ ಸುದ್ದಿಮೈಸೂರು

ಮಾಧ್ಯಮಕ್ಕೆ ತತ್ವ ಸಿದ್ದಾಂತ ಬೇಕಿದೆ : ಎಚ್.ವಿಶ್ವನಾಥ್  

ವರದಿಗಳಿಗೆ ವ್ಯಕ್ತಿ ನಿಷ್ಠೆಯಿರಬಾರದು : ಮಾಧುಸ್ವಾಮಿ

ಸುತ್ತೂರು, ಮಾ.1 : ಸುತ್ತೂರಿನಲ್ಲಿ ನಡೆಯುತ್ತಿರುವ 34ನೇ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನದಂಗವಾಗಿ ಆಯೋಜಿಸಿರುವ ಮೊದಲ ಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಅಡಗೂರು ಹೆಚ್. ವಿಶ್ವನಾಥ್ ಅವರು ಮಾಧ್ಯಮ ಮತ್ತು ರಾಜಕಾರಣ ವಿಷಯವಾಗಿ  ಮಾತನಾಡಿ,  ಮಾದ್ಯಮ ಮತ್ತು  ರಾಜಕಾರಣ ಬಡವರ ವೃತ್ತಿ ಅಲ್ಲ ಎನ್ನುವ ಮಾತುಗಳು ಟೀಕೆಗಳು ಇತ್ತೀಚೆಗೆ ಹೆಚ್ಚಾಗಿ ಇಂತಹ ಮಾತುಗಳು ಕೇಳಿ ಬರುತ್ತಿವೆ. ದೃಶ್ಯ ಮಾಧ್ಯಮಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಟೀಕೆಗೆ ಒಳಗಾಗಿದೆ. ಆ್ಯಂಕರ್ ಗಳೇ ಮಾತನಾಡುತ್ತಿರುತ್ತಾರೆ. ಆತ ಯಾವುದೋ ಪಕ್ಷದ ಪರ ಮಾತನಾಡುತ್ತಿದ್ದಾರೆ ಎನಿಸುತ್ತದೆ.

ಪತ್ರಿಕೆಗಳಲ್ಲಿ ಸುದ್ದಿಯಾವುದು ಸಂಪಾದಕೀಯ ಯಾವುದು ಎನ್ನುವ ವ್ಯತ್ಯಾಸ ವೇ ಇಲ್ಲದಂತಾಗಿದೆ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಗೌರವಿಸುವಂತೆ ನಡೆಯಬೇಕು. ಯಾವುದೇ ಚರ್ಚೆಗಳು ತಾರ್ಕಿಕ ಅಂತ್ಯ ಕಾಣುತ್ತಿಲ್ಲ.  ಪಾಕಿಸ್ತಾನದ ಯುದ್ದ ಬಿಜೆಪಿಗೆ 22 ಸ್ಥಾನ ಬರುತ್ತದೆ ಎಂದು ಯಡಿಯೂರಪ್ಪ ಹೇಳಿದ್ದು ಚರ್ಚೆ ಆಗಿಲ್ಲ, ಮೀಟು ನೂ ಅದೇ ದಾರಿ ಹಿಡಿಯಿತು.  ರಾಜಕಾರಣ, ಮಾಧ್ಯಮ ನಗೆಪಾಟಲಿಗೀಡಾಗುತ್ತಿದ್ದು, ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ. ರಂಗಯ್ಯ ಅವರು ಅರಮನೆ ಬಗ್ಗೆ ಬರೆದಾಗ ರಾಜರು ಬರಲು‌ ಕಳಿಸುತ್ತಾರೆ ಆದರೆ ಹೋಗದಿದ್ದಾಗ ಅವರನ್ನು ಬಳ್ಳಾರಿ ಗಡಿಪಾರು ಮಾಡುತ್ತಾರೆ. ಆದರೆ ದೃತಿಗೆಡದೆ ಅಲ್ಲಿಂದಲೇ ಪತ್ರಿಕೆ ಮಾಡಿದ್ದ ಗಟ್ಟಿಗರು.

ಇದೇ ವಿಷಯವಾಗಿ ಶಾಸಕ ಚಿಕ್ಕಮಾದು ಸ್ವಾಮಿ  ಮಾತನಾಡಿ, ಗಾಂಧೀಜಿ ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆ ಯನ್ನು ಸಮರ್ಥವಾಗಿ ಬಳಸಿಕೊಂಡು ಜನಾಭಿಪ್ರಾಯ ಮೂಡಿಸಿದರು. ರಾಜಾರಾಮ್ ಮೋಹನರಾಯರು ದೇಶದ ಪತ್ರಿಕೆಗಳನ್ನು ಉತ್ತಂಗಕ್ಕೆ ತೆಗೆದುಕೊಂಡು ಹೋದರೂ ಬಾಲಗಂಗಾಧರನಾಥ ತಿಲಕ್ ಅವರು ಕೈ ಜೋಡಿಸಿದರು.

ಯಾವುದೇ ಕ್ಷೇತ್ರವನ್ನು ಪ್ರೋತ್ಸಾಹಿಸುವ ತಳ್ಳುವ ಕೆಲಸವನ್ನು ಮಾಧ್ಯಮ ಮಾಡುತ್ತದೆ. ವರದಿಗಳನ್ನು ಬರೆಯುವಾಗ ವ್ಯಕ್ತಿ ನಿಷ್ಠೆ ಇರಬಾರದು, ವಸ್ತು ನಿಷ್ಟವಾಗಿರಬೇಕು, ಸಮಾಜಕ್ಕೆ ಉತ್ತಮ ಸಂದೇಶ ಬೇಕಿದೆ.
ಸಂಪಾದಕೀಯ ಉತ್ತಮ‌ ಸಂದೇಶ ನೀಡುತ್ತಿತ್ತು, ಜ್ಞಾನ ನೀಡುತ್ತಿತ್ತು. ಆದರೆ ಈಗ ಅದು ಕಾಣೆಯಾಗಿದೆ. ವಸ್ತು ನಿಷ್ಠೆ ಇಲ್ಲವಾಗಿದೆ ರಾಜಕೀಯ ಶಕ್ತಿ ನೀಡಬೇಕು. ಅಮೇರಿಕಾದ ಆದ್ಯಕ್ಷೀಯ ಚುನಾವಣೆಯಲ್ಲಿ ಒಂದು‌ ಸುಳ್ಳು ವರದಿ ಹಿಲರಿ ಕ್ಲಿಂಟನ್ ಅವರ ಸೋಲಿಗೆ ಕಾರಣವಾಯಿತು. ಈಗ ಅಂತಹದ್ದು ನಡೆಯಬಾರದು, ಟೀಕೆಗಳು ಅಭಿವೃದ್ಧಿಗೆ ಪೂರಕವಾಗಬೇಕಾಗಿದೆ. ದಿಢೀರ್ ಹೆಸರು ಮಾಡಬೇಕು ಎನ್ನುವ ಕಾಲ ಬಂದಿದೆ. ಟಿವಿ ಚರ್ಚೆಗಳು ಆ್ಯಂಕರ್ ಗೆ ಮಾತ್ರ ಸೀಮಿತ ಎನ್ನುವಂತಾಗಿದೆ. ಬೇರೆಯವರಿಗೆ ಚರ್ಚೆಗೆ ಅವಕಾಶ ಇಲ್ಲದಂತಾಗಿದೆ. ಆದ್ದರಿಂದ ವರದಿಗೆ ಮುನ್ನಾ ಪರಿಶೀಲಿಸಬೇಕು, ರಾಜಕಾರಣಿಗಳನ್ನು ತಿದ್ದುವ‌ ಕೆಲಸ ‌ಮಾಡಬೇಕು.
ತನಿಖಾ ವರದಿ ಇಲ್ಲವಾಗಿದೆ, ನೀವೆ ಹುಡುಕಾಟ ಮಾಡುವ ತನಿಖಾ ವರದಿ ಇಲ್ಲವಾಗಿದೆ. ಸತ್ಯಕ್ಕೆ ಹತ್ತಿರವಾದ ವರದಿಗಳು ಬರಬೇಕಾಗಿದೆ, ಆಗ ಜನರಲ್ಲಿ ವಿಶ್ವಾಸ ಮೂಡುತ್ತದೆ.
ರಾಜಕಾರಣವನ್ನು ಕಲುಷಿತಗೊಳ್ಳಲು ಎಲ್ಲ ರಂಗವೂ ಕಾರಣವಾಗಿದೆ. ಭ್ರಷ್ಟಾಚಾರ ಕ್ಯಾನ್ಸರ್ ನಂತಾಗಿದ್ದು ಅದನ್ನು ತೆಗೆಯಬೇಕಾಗಿದೆ.
ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ, ಸೋಲುತ್ತಾರೆ ಎನ್ನುವ ಚುನಾವಣಾ ಪೂರ್ವ ವರದಿ ನಿಲ್ಲಿಸಬೇಕಿದೆ. ಸತ್ಯ ವನ್ನು ಧೈರ್ಯವಾಗಿ ಹೇಳುವಂತಾಗಬೇಕು. ರಾಜಕಾರಣವನ್ನು ಹಸನು ಮಾಡುವ ಮೂಲಕ ಜನಜಾಗೃತಿ ‌ಮೂಡಿಸಬೇಕು ಎಂದು ತಿಳಿಸಿದರು.
ಗೋಷ್ಠಿಯಲ್ಲಿ  ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮೈಸೂರು-ಚಾಮರಾಜನಗರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಟಿ.ಹರೀಶ್ ಗೌಡ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು. ಜಿಲ್ಲಾಧ್ಯಕ್ಷ ಸಿ.ಕೆ.ಮಹೇಂದ್ರ ಮತ್ತಿತರರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: