ಮೈಸೂರು

ಒಗ್ಗಟ್ಟಿದ್ದಾಗ ಮಾತ್ರ ರಂಗಭೂಮಿಯನ್ನು ಉತ್ತುಂಗಕ್ಕೆ ಕೊಂಡೊಯ್ಯಬಹುದು : ಡಾ.ಹೆಚ್.ಎ.ಪಾರ್ಶ್ವನಾಥ್ ಅಭಿಮತ

ಒಬ್ಬರ ಉಮೇದುವಾರಿಕೆಯಿಂದ ರಂಗಭೂಮಿಯ ಅಭಿವೃದ್ಧಿ ಅಸಾಧ್ಯ. ಎಲ್ಲರೂ ಒಗ್ಗೂಡಿ ಮುನ್ನಡೆದಾಗ ಮಾತ್ರ ರಂಗಭೂಮಿಯನ್ನು ಉತ್ತುಂಗಕ್ಕೆ ಕೊಂಡೊಯ್ಯಬಹುದು ಎಂದು ಲೇಖಕ ಹಾಗೂ ರಂಗಕರ್ಮಿ ಡಾ.ಹೆಚ್.ಎ.ಪಾರ್ಶ್ವನಾಥ್ ಅಭಿಪ್ರಾಯಪಟ್ಟರು.

ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯ  ಸಂಯುಕ್ತಾಶ್ರಯದಲ್ಲಿ  ಮೈಸೂರು ಕನ್ನಡ ಸಾಹಿತ್ಯ ಪರಿಷತ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷ್ಣಜನಮನ ರಚನೆಯ ಚೇತನಬುಕ್‍ಹೌಸ್ ಹೊರತಂದಿರುವ ಕಲಾತಪಸ್ವಿ ರಾಜಶೇಖರ ಕದಂಬ ಪುಸ್ತಕ  ಲೋಕಾರ್ಪಣೆ ಸಮಾರಂಭದಲ್ಲಿ  ಪಾಲ್ಗೊಂಡು ಮಾತನಾಡಿದರು.

ರಂಗಭೂಮಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಬಯಸುತ್ತದೆ. ಸದಾ ಚಿಂತನಶೀಲ ಕಾರ್ಯಕ್ರಗಳು ರಂಗಭೂಮಿಯಲ್ಲಾಗುತ್ತವೆ. ರಾಜಶೇಖರ ಕದಂಬ ಅವರು ತಮ್ಮ ಜೀವನವನ್ನೇ ರಂಗಭೂಮಿಗೆ ಮುಡಿಪಾಗಿಟ್ಟಿದ್ದಾರೆ. ಪ್ರತಿಯೊಂದು ಕ್ಷಣವೂ ರಂಗಭೂಮಿಯ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಾರೆ. ಅವರ ಜೀವನದ ಕುರಿತು ರಚನೆಯಾಗಿರುವ ಈ ಪುಸ್ತಕ 6 ಅಧ್ಯಾಯಗಳನ್ನು ಹೊಂದಿದ್ದು, ಬಾಲ್ಯದಿಂದ ಇಲ್ಲಿಯವರೆಗೆ ಅವರ ಜೀವನದ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಅವರು ನಿಜವಾಗಿಯೂ ಕಲಾತಪಸ್ವಿಯೇ ಸರಿ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕ ಪ್ರೊ.ಹೆಚ್.ಎಸ್.ಉಮೇಶ್, ಜಿ.ಎಸ್.ಭಟ್ಟ, ಕೃಷ್ಣಜನಮನ, ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ರಾಜಶೇಖರ ಕದಂಬ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: