ಕರ್ನಾಟಕ

‘ಜೀ ಕನ್ನಡ’ದಲ್ಲಿ ಇಂದಿನಿಂದ ಸರಿಗಮಪ ಲಿಟ್ಲ್ ಚಾಂಪ್ಸ್

ಬೆಂಗಳೂರು (ಮಾ.2): ಕನ್ನಡ ಕಿರುತೆರೆ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜೀ ಕನ್ನಡದ ‘ಸರಿಗಮಪ ಲಿಟ್ಲ್ ಚಾಂಪ್ಸ್’ ಸೀಸನ್ 16 ಇಂದಿನಿಂದ ಆರಂಭವಾಗುತ್ತಿದ್ದು, ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 8ಕ್ಕೆ ಪ್ರಸಾರವಾಗಲಿದೆ.

ಕಳೆದ 15 ಸೀಸನ್ ಗಳಿಂದ ಈ ಕಾರ್ಯಕ್ರಮದ ಮೂಲಕ ಹಲವಾರು ಮಂದಿ ಕಿರಿಯ ಗಾಯಕರು ತಮ್ಮ ಗಾನಸುಧೆಯಿಂದ ರಾಜ್ಯದಲ್ಲಿ ಮನೆ ಮಾತಾಗಿದ್ದು, ಇದೀಗ ಆರಂಭವಾಗುತ್ತಿರುವ ಮತ್ತೊಂದು ಸೀಸನ್ ನಿಂದ ಮತ್ತಷ್ಟು ಪ್ರತಿಭಾವಂತರು ತಮ್ಮ ಕಂಠದಿಂದ ಮೋಡಿ ಮಾಡಲಿದ್ದಾರೆ.

ಮಹಾ ಗುರುಗಳಾಗಿ ನಾದಬ್ರಹ್ಮ ಹಂಸಲೇಖ ಮುಂದುವರಿಯಲಿದ್ದು, ತೀರ್ಪುಗಾರರಾಗಿ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಾರ್ಯ ನಿರ್ವಹಿಸಲಿದ್ದಾರೆ. ಅನುಶ್ರೀ ಕಾರ್ಯಕ್ರಮ ನಿರೂಪಿಸಲಿದ್ದಾರೆ. (ಎನ್.ಬಿ)

Leave a Reply

comments

Related Articles

error: