ಕರ್ನಾಟಕ

ಮಹಿಳೆಯರಿಗೆ ಸಿಹಿ ಸುದ್ದಿ: ಸಹಕಾರಿ ಸಂಘದ ಸಾಲ‌ ಕೂಡ ಮನ್ನಾ – ಸಿಎಂ ಘೋಷಣೆ

ಬೆಂಗಳೂರು (ಮಾ.2): ರೈತರ ಸಾಲ ಮನ್ನಾ ಬಳಿಕ, ಮಹಿಳೆಯರ ಸಹಕಾರಿ ಸಂಘದ ಸಾಲ‌ವನ್ನೂ ಮನ್ನಾ ಮಾಡುವೆ ಅಂತ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಘೋಷಣೆ ಮಾಡಿದ್ದಾರೆ.

ಅವರು ಶುಕ್ರವಾರ ನಗರದಲ್ಲಿ ನಡೆದ ಸಿಎಂ ಕುಮಾರಸ್ವಾಮಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಹಿಳಾ ಸಂಘದವರು ತಮ್ಮ ಸಾಲ ಮನ್ನಾ ಮಾಡುವಂತೆ ಮುಖ್ಯಮಂತ್ರಿ ಅವರನ್ನು ಕೇಳಿಕೊಂಡರು. ಈ ವೇಳೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಹೆಚ್​ಡಿಕೆ, ರೈತರ ಸಾಲ‌ ಮುಗಿದ ಮೇಲೆ ಮಹಿಳೆಯರ ಸಹಕಾರಿ ಸಂಘದ ಸಾಲ ಮನ್ನಾ ಮಾಡುವುದಾಗಿ ತಿಳಿಸಿದರು.

ಇದೇ ವೇಳೆ ಮಾಜಿ ಪ್ರಧಾನಿ ದೇವೇಗೌಡರನ್ನ ಕಣಕ್ಕಿಳಿಯುವಂತೆ ಬಹಿರಂಗ ಸಭೆಯಲ್ಲಿ ಮನವಿ ಮಾಡಿದ ಸಚಿವ ಜಿ.ಟಿ.ದೇವೇಗೌಡ, ದೇವೇಗೌಡರು ಮೈಸೂರು ಕ್ಷೇತ್ರದಿಂದ ಕಣಕ್ಕಿಳಿಯದಿದ್ದರೆ ನಿಖಿಲ್​ ಅವರನ್ನು ಕಳುಹಿಸಿ ನಾವು ಗೆಲ್ಲಿಸಿ ಕೊಡುತ್ತೀವಿ ಎಂದರು. ನಿಖಿಲ್ ಮಂಡ್ಯದಿಂದ ಸ್ಪರ್ಧಿಸಲು ಬಯಸಿದ್ದಾರೆ. ಆದರೆ ನಾವು ಅವರನ್ನು ಮೈಸೂರಿನಿಂದ ಸ್ಪರ್ಧೆ ಮಾಡುವಂತೆ ಜಿಟಿಡಿ ಮನವಿ ಮಾಡಿಕೊಂಡರು. (ಎನ್.ಬಿ)

Leave a Reply

comments

Related Articles

error: