ಪ್ರಮುಖ ಸುದ್ದಿಮೈಸೂರು

ಸಾಮಾನ್ಯ ಜ್ಞಾನದೊಂದಿಗೆ ಮಾನವೀಯ ನೆಲೆಯಲ್ಲಿ ಸುದ್ದಿ ನೀಡಬೇಕು : ಸಂಪಾದಕರ ಸಂವಾದ

ಸುತ್ತೂರು.ಮಾ. 2: ಸುತ್ತೂರಿನಲ್ಲಿ ನಡೆಯುತ್ತಿರುವ 34 ರಾಜ್ಯ ಪತ್ರಕರ್ತರ ಸಮ್ನೇಳನದ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಎರಡನೇ ದಿನದಂದು ಹಮ್ಮಿಕೊಂಡಿದ್ದ ಸಂಪಾದಕರ ಸಮ್ಮಿಲನ ; ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಹಲವು ದಿನಪತ್ರಿಕೆಗಳ ಪ್ರಮುಖರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯ ಪತ್ರಕರ್ತ ಕಂಕ ಮೂರ್ತಿ ಮಾತನಾಡಿ, ಪತ್ರಕರ್ತರನಿಗೆ ಬದುಕಿನ ಸಾಮಾನ್ಯ ಜ್ಞಾನದ ಅರಿವಿನೊಂದಿಗೆ. ಸದಾ ಜಾಗೃತರಾಗಬೇಕು‌ ಇಲ್ಲವೇ ಕಾಲದ ಕಸದ ಬುಟ್ಟಿಗೆ ಸೇರಲಿದ್ದೆವೆ ಎಂದು , ಬೇರೆಯವರ ವಿರುದ್ದ ಬಳಸುವ ಪದಗಳನ್ನು ನಿಮ್ಮ ಮೇಲೆ ಹಾಕಿಕೊಂಡು ನೋಡಿ. ಅಕ್ಷರಗಳೇ ಸಂಘರ್ಷಕ್ಕೆ ಕಾರಣವಾಗಲಿದೆ ಇದನ್ನು ಅರಿಯಬೇಕು. ಹೇಳಿಗಳ ಹೊರತಾಗಿ ಪತ್ರಕರ್ತ ಕೇಳುಗನು ಅಗಬೇಕಿದ್ದು ಪತ್ರಕರ್ತನೆಂಬ ಅಹಂ ಅನ್ನು ತೊರೆದು ಸಂಘಟಿತರಾಗಬೇಕಿದೆ ಎಂದು ತಿಳಿಸಿದರು. ವಿಜಯವಾಣಿ ಪತ್ರಿಕೆ ಸಂಪಾದಕ ಕೆ.ಎನ್ ಚನ್ನೇಗೌಡ ಮಾತನಾಡಿ, ಸಾಮಾಜಿಕ ತಾಣಗಳ ತ್ವರಿತವಾಗಿ ಓದುಗರ ಸಂಖ್ಯೆ ಕ್ಷಣಿಸುತ್ತಿದೆ. ಅವರನ್ನು ಸೆಳೆಯುವ ಕೆಲಸವಾಗದೆ ಇರುವುದು.ಸಾಮಾಜಿಕ ಜಾಲ ತಾಣಗಳಲ್ಲಿ ಬಿತ್ತರವಾಗುವ ಸುದ್ದಿಯಿಂದ ಪತ್ರಿಕೆಗಳನ್ನು ಓದಲು ಅಸಕ್ತಿ ಕಡಿಮೆಯಾಗುತ್ತಿದ್ದು ಅವರನ್ನು ಸೆಳೆಯುವ ಕಾರ್ಯದ ನಿಟ್ಟಿನಲ್ಲಿ ಮುದ್ರಣ ಮಾದ್ಯಮ ಹೊಸತನವನ್ನು ಬೆಳೆಸಿಕೊಳ್ಳುವುದು ಅವಶ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹೊಸದಿಗಂತ ಸಂಪಾದಕ ವಿನಾಯಕ ಭಟ್ ಮೂರೂರು. ಆಂದೋಲನ ಪತ್ರಿಕೆ ಸಂಪಾದಕ ರವಿ ಕೋಟಿ ಸೇರಿದಂತೆ ಹಲವು ಸಂಪಾದಕರು ಸಂವಾದದಲ್ಲಿ ಭಾಗಿಯಾಗಿದ್ದರು.

ಜನರಿಗೆ ಬೇಕಾಗಿರುವುದು ನೀಡಬೇಕೆ ಹೊರತು ಪತ್ರಿಕೆಗೆ ಬೇಕಾಗಿರುವುದು ಪ್ರಕಟಿಸಿದರೆ ಓದುಗ ಒಪ್ಪಿಕೊಳ್ಳಬಹುದು. ಸಾಮಾಜಿಕ‌ ಜಾಲತಾಣಗಳಲ್ಲಿ ಹಾವಳಿಯಲ್ಲಿ ದೃಢವಾಗಿ ನಿಲ್ಲುವ ಅವಶ್ಯ ಹೆಚ್ಚಾಗಿದೆ ಎಂದು ಆಂದೋಲನ ಪತ್ರಿಕೆ ಸಂಪಾದಕ ರವಿ ಕೋಟಿ ತಿಳಿಸಿದರು.
ವಿಷಯ ಅಭಿಪ್ರಾಯಗಳನ್ನು ಹೊರತು ಪಡಿಸಿ ಒಗ್ಗಟ್ಟಿ‌ನಿಂದ ಇರಬೇಕಿದೆ. ಪತ್ರಕರ್ತರ ಸುದ್ದಿಯನ್ನು ಪ್ರಕಟಿಸುವ ಕತ್ತರಿ ಪ್ರಯೋಗವನ್ನು ಉಪಯೋಗಿಸದೆ ಇರುವುದು ಒಳಿತು. ನಮ್ಮ ನಮ್ಮ ವಿಷಯಗಳನ್ನು ಚರ್ಚಿಸಿ ಅದಕ್ಕೆ ಪರಿಹಾರ ಕೊಂಡುಕೊಳ್ಳಬೇಕಿದೆ. ನಾನು ಇತರರನ್ನು ಹಿಂಬಾಲಿಸುವುದನ್ನು ಬಿಡಬೇಕು. ನಮ್ಮೊಳಗಿನ ಮಾಧ್ಯಮಗಳೊಂದಿಗಿನ ಸಂಬಂಧಗಳನ್ನು ಗಟ್ಟಿಗೊಳಿಸಬೇಕಿದೆ ಹೊಸ ದಿಗಂತ ಪತ್ರಿಕೆ ಸಂಪಾದಕ ವಿನಾಯಕ ಭಟ್ ಮೂರೂರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂವಾದ : ಹೈದ್ರಾಬಾದ್ ಕರ್ನಾಟಕ ಸುದ್ದಿಗಳ ಬಗ್ಗೆ ಮಲತಾಯಿ ಧೋರಣೆ. ಪೇಯಿಡ್ ಸುದ್ದಿಗಳನ್ನು ಹೇಗೆ ನಿಭಾಯಿಸಬೇಕು. ಗಡಿ ಜಿಲ್ಲೆ ಗ್ರಾಮಗಳಲ್ಲಿ ಮಾತೃ ಭಾಷೆ ಕಡೆಗಣನೆ ಬಗ್ಗೆ ಪ್ರಶ್ನೆಗಳು ಮೂಡಿದವು.

ಅದಕ್ಕೆ ಪ್ರತಿಯಿಸಿದ ಹಿರಿಯ ಸಂಪಾದಕರು ಪೇಯಿಂಡ್ ಪತ್ರಕರ್ತರಿಗೆ ಪೇಯ್ ಮಾಡೋದು ತಪ್ಪು. ಅದರೆ ಸಂಸ್ಥೆಗೆ ಪೇಯಿಂಡ್ ಅವಶ್ಯವೆಂದು. ಪತ್ರಕರ್ತರೆ ಪೇಯಿಂಡ್ ಸುದ್ದಿ ಮಾಡುವುದು ಅತಂಕ. ಈ ಬಗ್ಗೆ ಸಂಸ್ಥೆಗಳ ಹಿರಿಯರಿಗೆ ತಿಳಿಸಬೇಕು ಎಂಬ ಅಭಿಪ್ರಾಯ ಮೂಡಲಾಯಿತು.

ಅಂಕಗಳಿಗೆ ಬರೆಯೋರು ನೈಜ ಪತ್ರಕರ್ತರಾಗುವುದಿಲ್ಲ. ನಿರಂತರ ಅಭ್ಯಾಸದಿಂದ ಉತ್ತಮ ಲೇಖನ ಮೂಡುವುದು ಎಂದು ಪ್ರಶ್ನೆಗೆ ಉತ್ತರಿಸಿದರು. ಪತ್ರಿಕೆಗಳನ್ನುದರ ಪೈಪೋಟಿಯಿಂದ ಜಿಲ್ಲಾಮಟ್ಟದ ಪತ್ರಿಕೆಗಳ ನಿರ್ವಹಣೆ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ

ಸಮಾರಂಭದಲ್ಲಿ ಭಾಗಿಯಾಗಿದ್ದ ಶಾಸಕ ಎಸ್.ಎ. ರಾಮದಾಸ್ ಅವರು ಮಾತನಾಡಿ. ಪ್ರತಿಯೊಬ್ಬರು ಸ್ಪರ್ಧಾತ್ಮಕ ವಾಗಿ ಬದುಕುವುದು ಅನಿವಾರ್ಯವಾಗಿದೆ. ಅತಿ ಹೆಚ್ಚು ಚರ್ಚೆಗೆ ಗ್ರಾಸವಗುವ ರಾಜಕಾರಣಿಯೂ ಸಕಾರಾತ್ಮಕ ಚರ್ಚೆ ಅಗತ್ಯವಿದ್ದು ಈ ನಿಟ್ಟಿನಲ್ಲಿ ಯುವ ಜನತೆ ಚಿಂತನೆವ್ಯಯ ನಡೆಸಬೇಕು. ತಮ್ಮ ಲೇಖ‌ನಗಳಲ್ಲಿ ಹಾಗೂ ಬರವಣಿಗೆ ಮೂಲಕ ಸಮಾಜ ಜಾಗೃತಿಗೊಳಿಸಬೇಕಿದೆ ಎಂದು ತಿಳಿಸಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: