ಮೈಸೂರು

ಮೈಸೂರಿನಲ್ಲಿ ಸಿಲ್ಕ್ ಮಾರ್ಕ್ ಎಕ್ಸ್ ಪೊ – 2019 ಚಾಲನೆ

ಮೈಸೂರು, ಮಾ.2:- ಭಾರತ ಸರ್ಕಾರದ ಜವಳಿ ಇಲಾಖೆ ಅಡಿ ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಸ್ಥಾಪಿತವಾದ ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ಇಂಡಿಯಾ(ಎಸ್‍ಎಂಒಐ), 5 ದಿನಗಳ ಕಾಲ ಸಿಲ್ಕ್ ಮಾರ್ಕ್ ಎಕ್ಸ್ ಪೊ 2019 ಎಂಬ  ಸಿಲ್ಕ್ ಮಾರ್ಕ್ ಲೇಬಲ್ ಹೊಂದಿರುವ ಉತ್ಪನ್ನಗಳ ರಾಷ್ಟ್ರೀಯ ಮಟ್ಟದ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮಾರ್ಚ್ 2ರಿಂದ 6, 2019ರವರೆಗೆ ಮೈಸೂರಿನ ವಿನೋಬಾ ರಸ್ತೆಯ ಹೋಟೆಲ್ ಸದರ್ನ್ ಸ್ಟಾರ್‍ನಲ್ಲಿ  ಆಯೋಜಿಸಿದೆ.

6 ರಾಜ್ಯಗಳ ನೇಕಾರರ  14 ಸ್ಟಾಲ್‍ಗಳನ್ನು ಈ ಮೇಳ ಹೊಂದಿರುತ್ತದೆ. ಕೇವಲ ಎಸ್‍ಎಂಒಐನಲ್ಲಿ ನೋಂದಣಿ ಮಾಡಿಕೊಂಡಿರುವ ಶುದ್ಧ ರೇಷ್ಮೆ ಉತ್ಪನ್ನಗಳ ಅಧಿಕೃತ ಉತ್ಪಾದಕರು, ನೇಕಾರರು ಮತ್ತು ರಿಟೇಲರ್‍ಗಳಿಗೆ ಮಾತ್ರ ಸ್ಟಾಲ್‍ಗಳನ್ನು ಹಂಚಿಕೆ ಮಾಡಲಾಗಿದೆ.

ಮಲ್ಬರಿ, ಟೆಸ್ಸಾರ್, ಎರಿ ಮತ್ತು ಮುಗ ಕುಕೂನ್‍ಗಳು, ಎಳೆಗಳು ಮತ್ತು ಜವಳಿಗಳನ್ನು ಒಳಗೊಂಡ ಸಿಲ್ಕ್ ಮಾರ್ಕ್ ಜವಳಿ ಈ ಪ್ರದರ್ಶನದಲ್ಲಿರುತ್ತವೆ. ವನ್ಯ ಸಿಲ್ಕ್ ಮಾರ್ಕೆಟಿಂಗ್ ಪ್ರೊಮೋಷನ್ ಸೆಲ್(ವಿಎಸ್‍ಎಂಪಿಸಿ) ಅಲ್ಲದೆ ಪ್ರಾಡಕ್ಟ್ ಡಿಸೈನ್, ಡೆವಲಪ್‍ಮೆಂಟ್ ಅಂಡ್ ಡೈವರ್ಸಿಫಿಕೇಷನ್(ಪಿ3ಡಿ)ಗಳಿಂದ ವನ್ಯಾ ಸಿಲ್ಕ್ ಬಳಸಿ ಅಭಿವೃದ್ಧಿಪಡಿಸಲಾದ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಕುರಿತ ಚಿಂತನೆಗಳನ್ನು ಸಿಎಸ್‍ಬಿ ಅಧಿಕಾರಿಗಳು ವಿವರಿಸುತ್ತಾರೆ. ಉಚಿತ ಪರೀಕ್ಷಾ ಕೌಂಟರ್ ಗ್ರಾಹಕರು ತಂದಿರುವ ರೇಷ್ಮೆ ಉತ್ಪನ್ನಗಳ ಶುದ್ಧತೆಯನ್ನು ಪರೀಕ್ಷಿಸಿ ಹೇಳುತ್ತದೆ.

ಇಂದು ಈ ಪ್ರದರ್ಶನ ಮೇಳವನ್ನು ಜಪಾನ್ ವಿವಿಯ ಕೀಟ ವಂಶವಾಹಿ ವಿಜ್ಞಾನ ಮತ್ತು ಜೈವಿಕ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರಾದ ಡಾ. ಶಿಮಾದಾ ತೊರು ಅವರು   ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್‍ನ ಸದಸ್ಯ ಕಾರ್ಯದರ್ಶಿ ಮತ್ತು ಬೆಂಗಳೂರು ಎಸ್‍ಎಂಒಐನ ಉಪ ಚೇರ್ಮನ್   ರಜಿತ್ ರಂಜನ್ ಓಖಾಂಡಿಯರ್ ಮತ್ತು ಸಿಎಸ್‍ಬಿ ಮತ್ತು ಎಸ್‍ಎಂಒಐನ ಚೇರ್ಮನ್   ಕೆ.ಎಂ. ಹನುಮಂತರಾಯಪ್ಪ ಮತ್ತು ಸಿಎಬಿನ ಎಸ್‍ಎಂಒಐನ ಸಿಇಒ   ಕೆ. ಎಸ್. ಗೋಪಾಲ್  ಹಾಜರಿದ್ದರು.

ಪರಂಪರೆ ನಗರದಲ್ಲಿನ ರೇಷ್ಮೆ ಪ್ರೇಮಿಗಳು ಆನಂದಿಸಬಹುದಾದ ಈ ಪ್ರದರ್ಶನದ ಮೇಳದಲ್ಲಿ ರೇಷ್ಮೆ ಪ್ರೇಮಿಗಳು ವೈವಿಧ್ಯಮಯ ರೇಷ್ಮೆ ಉತ್ಪನ್ನಗಳಾದ ಆಕರ್ಷಕ ವಿನ್ಯಾಸ ಮತ್ತು ಕಸೂತಿಯ ಟಸ್ಸಾರ್ ಸಿಲ್ಕ್ ಸೀರೆಗಳು, ಕಾಂತಾ ವರ್ಕ್, ಟಸ್ಸಾರ್ ಶರ್ಟ್‍ಗಳು, ಜ್ಯಾಕೆಟ್‍ಗಳು, ಎರ್ರಿ ಸಿಲ್ಕ್ ಸಾಕ್ಸ್‍ಗಳು, ಸಿಲ್ಕ್ ಬ್ಯಾಗ್‍ಗಳು, ಶರ್ಟ್‍ಗಳು, ದೋತಿಗಳು, ಬ್ಲೌಸ್‍ಗಳು, ಉಡುಪುಗಳು ಅಲ್ಲದೆ, ಸಾಂಪ್ರದಾಯಿಕ ಕಾಂಚೀಪುರಂ, ಬನಾರಸಿ,  ಬೆಂಗಳೂರು ಕೈಮಗ್ಗ, ಪಟೋಲಾ ಮುರ್ಷಿದಾಬಾದ್ ಕ್ರೇಪ್ ಸಿಲ್ಕ್ಸ್ ಮುಂತಾದ ಉತ್ಪನ್ನಗಳು ಇಲ್ಲಿರುತ್ತವೆ.  ಹೆಚ್ಚಿನ ಮಾಹಿತಿಗೆ ಗುಣಶೇಖರನ್, 9342483454 ಅವರನ್ನು ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: