ಕರ್ನಾಟಕಪ್ರಮುಖ ಸುದ್ದಿ

ವಿಜಯನಗರ ಗತವೈಭವದ ನೆನಪು: ಇಂದಿನಿಂದ ಹಂಪಿ ಉತ್ಸವ ಆರಂಭ

ಬಳ್ಳಾರಿ (ಮಾ.2): ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವ ಹಂಪಿ ಉತ್ಸವ ಇಂದಿನಿಂದ ಪ್ರಾರಂಭವಾಗಲಿದ್ದು ಎರಡು ದಿನಗಳ ಕಾಲ ನಡೆಯಲಿದೆ. ಇಂದು ಸಂಜೆ 4 ಗಂಟೆಗೆ ಕಲಾ ತಂಡಗಳಿಂದ ಶೋಭಾಯಾತ್ರೆ ನಡೆಯಲಿದ್ದು, 6 ಗಂಟೆಗ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ವಿಶೇಷ ಅತಿಥಿಯಾಗಿ ನಟ ದರ್ಶನ್, ಶಾಸಕ ಮುನಿರತ್ನ ಆಗಮಿಸಲಿದ್ದಾರೆ.

ಸಚಿವರಾದ ಡಿ.ಕೆ ಶಿವಕುಮಾರ್, ಸಾ.ರಾ ಮಹೇಶ್, ಪಿ.ಟಿ ಪರಮೇಶ್ವರ ನಾಯ್ಕ, ಇ.ತುಕಾರಾಮ್, ಸಂಸದ ವಿ.ಎಸ್ ಉಗ್ರಪ್ಪ, ಶಾಸಕ ಆನಂದ್ ಸಿಂಗ್ ಇನ್ನಿತರೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮಾರ್ಚ್ 2ರಂದು ರಾತ್ರಿ 10 ಗಂಟೆಗೆ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಮಾರ್ಚ್ 3ರಂದು ರಾತ್ರಿ 8.30ಕ್ಕೆ ಗಾಯಕ ವಿಜಯಪ್ರಕಾಶ್ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ. (ಎನ್.ಬಿ)

Leave a Reply

comments

Related Articles

error: