ಪ್ರಮುಖ ಸುದ್ದಿಮೈಸೂರು

ತೀವ್ರವಾಗಿ ಸುದ್ದಿ ನೀಡುವ ಅನಿವಾರ್ಯ ಮೂಡಿದೆ : ಹಿರಿಯ ಪತ್ರಕರ್ತ ಮೋಹನ್ ಅಭಿಪ್ರಾಯ 

ಸುತ್ತೂರು.ಮಾ.2 : ಕಾಲ ಬದಲಾಗಿದ್ದು ಡಿಜಿಟಲೀಕರಣದಿಂದ  ಕ್ಷಣಕ್ಕೆ ಸುದ್ದಿ ನೀಡುವ ಸಂಸ್ಕೃತಿ‌ ಮುದ್ರಣ ಕ್ಷೇತ್ರಕ್ಕೂ ಕಾಲಿರಿಸಿದ್ದು ಕಾಲಕ್ಕೆ ತಕ್ಕಂತೆ ನಡೆಯಬೇಕಾದ ಅನಿವಾರ್ಯವಿದೆ ಎಂದು ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ತಿಳಿಸಿದರು.

34 ನೇ ಪತ್ರಕರ್ತರ ಸಮ್ಮೇಳನದಲ್ಲಿ ‘ಮಾಧ್ಯಮ ಮತ್ತು ಡಿಜಿಟಲೀಕರಣದ ಸವಾಲುಗಳು’ ವಿಷಯವಾಗಿ ನಡೆದ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶವೂ ಅತಿ ಹೆಚ್ಚು ಅಂತರ್ಜಾಲ ಬಳಸುವ ದೊಡ್ಡ ರಾಷ್ಟ್ರವಾಗಿದ್ದು ಡಿಜಿಟಲ್ ಮೀಡಿಯವನ್ನು ಕೈ ವಶಪಡಿಸಿಕೊಳ್ಳಲು ಕಾರ್ಪೊರೇಟ್ ಸಂಸ್ಥೆಗಳು ಹವಣಿಸುತ್ತಿವೆ ಎಂದರು.

ಧಮನಿತರ ಧ್ವನಿಯಾಗಿ ಡಿಜಿಟಲ್ ಮಿಡೀಯಾ ಗುರುತಿಸಿಕೊಳ್ಳುತ್ತಿದೆ. ಅಲ್ಲದೇ ಸುಳ್ಳು ಸುದ್ದಿಗಳು ಅತಿ ವೇಗವಾಗಿ ಹರಡುತ್ತಿರುವುದು ಖೇಧಕರ.   ಚುನಾಚಣೆಯಲ್ಲಿ ಗೆಲ್ಲಲು ಸಹ ಸಾಮಾಜಿಕ ಜಾಲತಾಣಗಳ ಬೆಂಬಲ ಬೇಕಾಗಿದೆ ಎಂಬ ಕಾಲಘಟ್ಟಕ್ಕೆ ಬಂದು ನಿಂತಿದ್ದೇವೆ. ಡಿಜಿಟಲ್ ಮೀಡಿಯಾವನ್ನ ಸಕಾರಾತ್ಮಕವಾಗಿ ಬಳಸದೆ ಹೋದಲ್ಲಿ ಗಂಡಾಂತರವಾಗಲಿದೆ ಎಂದು ತಿಳಿಸಿದರು.

ನವದೆಹಲಿಯ ಬ್ರಾಡ್ ಕಾಸ್ಟ್ ಎಡಿಟರ್ ಅಸೋಸಿಯೇಷನ್ ಮಾಜಿ ಕಾರ್ಯದರ್ಶಿ ಎನ್.ಕೆ.ಸಿಂಗ್  ಉದ್ಘಾಟಿಸಿದರು.  ಟೈಮ್ಸ್‌ ಆಪ್ ಇಂಡಿಯಾದ ಮನು ಅಯ್ಯಪ್ಪ. ಉದಯವಾಣಿ ಮುಖ್ಯ ವರದಿಗಾರ ಲಕ್ಷ್ಮೀ ನಾರಾಯಣ, ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜು ಸೇರಿದಂತೆ ಹಲವು ಹಿರಿಯ ಪತ್ರಕರ್ತರು ಅಭಿಪ್ರಾಯ ಮಂಡಿಸಿದರು. ಸಚಿವ ಬಂಡೆಪ್ಪ ಕಾಶೆಂಪೂರ.  ಸಂಘದ ರಾಜ್ಯಾಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನ, ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಾಗೂ ಇತರರು ಇದ್ದರು. ( ವರದಿ : ಕೆ.ಎಂ.ಆರ್)

 

Leave a Reply

comments

Related Articles

error: