ಪ್ರಮುಖ ಸುದ್ದಿಮೈಸೂರು

ಎರಡು ತಾಸು ನಗೆಗಡಲಿನಲ್ಲಿ ತೇಲಿಸಿದ ಹಾಸ್ಯ ದಿಗ್ಗಜರು

ಸುತ್ತೂರು, ಮಾ.2 : ಅಂಕಣಕಾರ ಪ್ರೊ.ಕೃಷ್ಣೇಗೌಡ, ಡಾ. ಬೆಣ್ಣಿ ಬಸವರಾಜು ಹಾಗೂ ಕೂಗಳ್ಳಿ ಕೊಟ್ರೇಶ್ ಅವರ ಮಾತಿಗೆ ನೆರದಿದ್ದ ಸಭಿಕರೆಲ್ಲ ಚಪ್ಪಾಳೆ ತಟ್ಟಿಕೊಂಡೇ ನಗೆಗಡಲಿನಲ್ಲಿ ತೇಲಿದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ಮಾ.1,2ರಂದು ಸುತ್ತೂರಿನಲ್ಲಿ ನಡೆಸುತ್ತಿರುವ ಪತ್ರಕರ್ತರ 34ನೇ ರಾಜ್ಯ ಸಮ್ಮೇಳನದಲ್ಲಿ ಮಾ.1ರ ಸಂಜೆ ಏರ್ಪಡಿಸಿದ್ದ ಹಾಸ್ಯ ಸಂಜೆ ಕಾರ್ಯಕಮದಲ್ಲಿ ಪಾಲ್ಗೊಂಡು ಹಾಸ್ಯ ದಿಗ್ಜರುಗಳು ಸುಮಾರು ಎರಡು ಗಂಟೆಗಳ ಅಧಿಕ ಸಮಯದವರೆಗೂ  ಹಾಸ್ಯದ ರಸದೌತಣವನ್ನು ಉಣಬಡಿಸಿದರು.

ಶಾಲಾ ಮಕ್ಕಳು- ಮಾಸ್ತರು, ಗಂಡ-ಹೆಂಡತಿ (ಪಕ್ಕದ ಮನೆಯವಳ) ಮಧ್ಯೆ ನಡೆಯುವ ಸಹಜ ವಿಷಯಗಳನ್ನೇ ಹಾಸ್ಯವಸ್ತುವನ್ನಾಗಿಸಿಕೊಂಡು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡರು.

ಮಿಮಿಕ್ರ ಕಲಾವಿದ ಕೂಗಳ್ಳಿ ಕೊಟ್ರೇಶ್ ಅವರ ಮಿಕ್ಕಿ ಮೌಸ್, ಟಾಂ ಅಂಡ್ ಝರೀ ಸೇರಿದಂತೆ ಹಲವು ಸಂಗೀತ ಪರಿಕರಗಳನ್ನು ತಮ್ಮದೇ ದಾಟಿಯಲ್ಲಿ ಮಾಡಿದ ಮಿಮಿಕ್ರಿಗೆ ಸುತ್ತೂರಿನ ಶಾಲಾ ಮಕ್ಕಳು ಸೇರಿದಂತೆ ನೆರೆದಿದ್ದ ಪತ್ರಕರ್ತರು ಹೊಟ್ಟೆಯುಣ್ಣಾಗುವಂತೆ ನಕ್ಕರು. ಕೃಷ್ಣೇಗೌಡರ ಅವರ ಕುಡುಕರ ಸುಪ್ರಭಾತವನ್ನು ಆಗ್ರಹಪೂರ್ವಕವಾಗಿ ಒತ್ತಾಯಿಸಿ ಹಾಡಿಸಲಾಯಿತು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: