ಪ್ರಮುಖ ಸುದ್ದಿ

ಪ್ರಧಾನಿ ಮೋದಿಯವರ ಸರ್ಕಾರ ಅದ್ಭುತವಾಗಿದೆ, ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದ್ರು ಬ್ರಿಟಿಷ್ ಸಂಸದ!

ದೇಶ(ನವದೆಹಲಿ)ಮಾ.4:- ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಅದ್ಭುತ ಹಾಗೂ ಫೈರ್ ಕ್ರ್ಯಾಕರ್ ಎಂದು ಬ್ರಿಟಿಷ್ ಸಂಸದ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ನಾನು ಮೆಚ್ಚಿದ್ದೇನೆ. ಹೀಗಾಗಿ ಅವರು ಮತ್ತೆ ಪ್ರಧಾನಿಯಾಗುವ ಅವಕಾಶ ಹೊಂದಿದ್ದಾರೆಂದು ಈ ಹಿಂದೆಯೇ ಹೇಳಿದ್ದೆ  ಎಂದು ಬೋರಿಸ್ ಜಾನ್ಸನ್ ತಿಳಿದರು. ಉಗ್ರರ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ನಮ್ಮ ಬೆಂಬಲವಿದೆ. ಇದು ನಮ್ಮ ಜವಾಬ್ದಾರಿ ಕೂಡ ಆಗಿದೆ. ಈ ನಿಟ್ಟಿನಲ್ಲಿ ಎರಡು ದೇಶಗಳು ಉಗ್ರರಿಗೆ ತಕ್ಕ ಪಾಠ ಕಲಿಸಲಿವೆ ಎಂದು ತಿಳಿಸಿದರು.

ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ದಾಳಿಯನ್ನು ಖಂಡಿಸುತ್ತೇವೆ. ಉಗ್ರರ ವಿರುದ್ಧ ಹೋರಾಡಲು ಭಾರತದ ಭುಜಕ್ಕೆ ಭುಜ ಕೊಡುತ್ತೇವೆಂದು ನಮ್ಮ ದೇಶದ ಜನರ ಮುಂದೆ ಹೇಳಿಕೊಂಡಿದ್ದೇನೆ. ಉಗ್ರರನ್ನು ಮಟ್ಟಹಾಕುವಲ್ಲಿ ಉಭಯ ದೇಶಗಳು ಯಶಸ್ವಿಯಾಗಲಿವೆ. ಭಯೋತ್ಪಾದನೆ ವಿರುದ್ಧ ಮೇಲುಗೈ ಸಾಧಿಸುತ್ತೇವೆ ಎಂದು ಹೇಳಿದರು. ನಾವು ಪಾಕಿಸ್ತಾನದ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದೇವೆ. ಆದರೆ ದೇಶದೊಳಗೆ ಭಯೋತ್ಪಾದನೆಗೆ ಸರ್ಕಾರವೇ ಹೊಣೆಯಾಗಿರುತ್ತದೆ. ಇದರಲ್ಲಿ ಯಾವುದೇ ಸಂದೇಹವೇ ಬೇಡ. ಈ ನಿಟ್ಟಿನಲ್ಲಿ ನಾವು ಪಾಕಿಸ್ತಾನದ ಮೇಲೆ ಭಾರೀ ಒತ್ತಡ ಹೇರುತ್ತಿದ್ದೇವೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: