ಮೈಸೂರು

ಮೈಸೂರಿನಿಂದ ಮಡಿಕೇರಿಗೆ ಚತುಷ್ಪಥ ರಸ್ತೆ ಮಾಡುವ ಉದ್ದೇಶ; ಶೀಘ್ರದಲ್ಲೇ ಭೂಸ್ವಾಧೀನ ಪ್ರಕ್ರಿಯೆ ; ಪ್ರತಾಪ್ ಸಿಂಹ

ಮೈಸೂರು,ಮಾ.5:- ಮೈಸೂರು ಮಡಿಕೇರಿ ವಿಭಾಗದ ನೂತನ ಕಛೇರಿಯನ್ನು ಸಂಸದ ಪ್ರತಾಪ್ ಸಿಂಹ ಇಂದು ಲೋಕಾರ್ಪಣೆ ಚಾಮರಾಜಪುರಂ ಗೀತಾ ರಸ್ತೆಯಲ್ಲಿ ಲೋಕಾರ್ಪಣೆಗೊಳಿಸಿದರು.

ನೂತನ ಕಚೇರಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ನೂತನ ಕಛೇರಿ ಸದ್ಬಳಕೆ ಮಾಡಿಕೊಳ್ಳುವಂತೆ ಸಂಸದ ಪ್ರತಾಪ್ ಸಿಂಹ ಕರೆ ನೀಡಿದರು. ಮೈಸೂರು ಬೆಂಗಳೂರು ನಡುವೆ 10 ಪಥದ ರಸ್ತೆ ನಿರ್ಮಿಸುತ್ತಿದ್ದೇವೆ.  ಮೈಸೂರಿನಿಂದ ಮಡಿಕೇರಿಗೆ 4 ಪಥದ ರಸ್ತೆ ಮಾಡುವ ಉದ್ದೇಶವಿದೆ.  ಮುಂದಿನ ದಿನಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಶೀಘ್ರದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದೆ. ಹೀಗಾಗಿ ಮೈಸೂರು ಮಡಿಕೇರಿ ವಿಭಾಗೀಯ ಕಚೇರಿ ಆರಂಭವಾಗಿದೆ ಎಂದರು. ಇದೇ ವೇಳೆ ಮೈಸೂರು ಮಡಿಕೇರಿ 275 ರಾಷ್ಟ್ರೀಯ ಹೆದ್ದಾರಿ ಸಂಬಂಧಿಸಿದಂತೆ ಸಭೆ ನಡೆಸಿದರು. ಇದೇ ವೇಳೆ ಅಧಿಕಾರಿಗಳು ಹೆದ್ದಾರಿ ಕುರಿತು ಮಾಹಿತಿ ನೀಡಿದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: