ಮೈಸೂರು

ಕಾಚಿಗುಡ ಎಕ್ಸಪ್ರೆಸ್ ರೈಲಿಗೆ ಸಂಸದ ಪ್ರತಾಪ್ ಸಿಂಹ ಹಸಿರು ನಿಶಾನೆ : ಕಾಚಿಗುಡ ಎಕ್ಸ್‌ಪ್ರೆಸ್ ಪ್ರಯಾಣಿಕರ ಅಗತ್ಯತೆ ಪೂರೈಸಲಿದೆ

ಮೈಸೂರು,ಮಾ.5;- ಹೈದರಾಬಾದನ್ನು ಸಂಪರ್ಕಿಸುವ ಮೈಸೂರುವರೆಗೆ ವಿಸ್ತರಣೆಗೊಂಡಿರುವ  ಮೈಸೂರು-ಕೆಎಸ್ ಆರ್ ಬೆಂಗಳೂರು ಕಾಚಿಗುಡ (ಹೈದ್ರಾಬಾದ್)  ಎಕ್ಸಪ್ರೆಸ್ ರೈಲಿಗೆ ಸಂಸದ ಪ್ರತಾಪ್ ಸಿಂಹ ಇಂದು ಹಸಿರು ನಿಶಾನೆ ತೋರಿದರು.

ಮೈಸೂರಿನ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ರೈಲು ವಿಸ್ತರಣೆಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು  ಮೈಸೂರು ಹೈದ್ರಾಬಾದ್ ನಡುವೆ ಸಾಕಷ್ಟು ವಾಣಿಜ್ಯ ವ್ಯವಹಾರ ಇದೆ. ಹೀಗಾಗಿ ಮೈಸೂರು – ಕಾಚಿಗುಡ ಎಕ್ಸ್‌ಪ್ರೆಸ್ ಪ್ರಯಾಣಿಕರ ಅಗತ್ಯತೆ ಪೂರೈಸಲಿದೆ. ಹಿಂದಿನ ಸರ್ಕಾರ ಕಳೆದ 10 ವರ್ಷಗಳಲ್ಲಿ ಈ ಭಾಗಕ್ಕೆ ಕೇವಲ 1 ಟ್ರೈನ್ ತರಲಿಲ್ಲ. ತಮ್ಮದೇ ಪಕ್ಷದ ಎಂಪಿ ಇದ್ದರೂ, ತರೋದಿಕ್ಕೆ ಆಗಲಿಲ್ಲ. ಆದರೆ ನರೇಂದ್ರ ಮೋದಿ ನೆರವಿನಿಂದ ನಾನು 6 ಟ್ರೈನ್ ತಂದಿದ್ದೇನೆ. ಬ್ರಿಟಿಷ್ ಕಾಲದ  ರೈಲ್ವೆ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾದರೆ ಮೋದಿಯಂತ ಪ್ರಧಾನಿ,  ಪೀಯೂಶ್ ಗೋಯಲ್ ರಂತಹ ಸಚಿವರಿರಬೇಕು. ಈ ಸೂರ್ಯ ಚಂದ್ರ ಇರೋದು ಎಷ್ಟು ಸತ್ಯನೋ, ಮೋದಿ ಮತ್ತೆ ಪ್ರಧಾನಿಯಾಗೋದು ಅಷ್ಟೇ ಸತ್ಯ ಎಂದು ಭವಿಷ್ಯ ನುಡಿದರು. ಮೈಸೂರಿನಿಂದ ಕೇವಲ 205 ರೂಪಾಯಿನಲ್ಲಿ ಹೈದ್ರಾಬಾದ್ ತಲುಪಬಹುದು. 2 ವರ್ಷಗಳಲ್ಲಿ ಮೈಸೂರು ರೈಲ್ವೆಯಲ್ಲಿ ಯಾವುದೇ ಕೆಲಸ ಇರಬಾರದು. ಈ ನಿಟ್ಟಿನಲ್ಲಿ ಮುಂದೆ ಸ್ಯಾಟಲೈಟ್ ರೈಲ್ವೆ ನಿಲ್ದಾಣ ಆದ ಬಳಿಕ ಎಲ್ಲಾ ಕೆಲಸ ಮಾಡುತ್ತೇನೆ. ನಾನು ಬೇರೆಯವರ ತರ ಕಮಿಷನ್ , ಜಾತಿ ಆಧಾರದ ಮೇಲೆ ರಾಜಕಾರಣ ಮಾಡಲ್ಲ. ರಾಜಕಾಣ ಮಾಡಲು ಮೈಸೂರಿಗೆ ಬಂದಿಲ್ಲ, ಸೇವೆ ಮಾಡಲು ಬಂದಿದ್ದೇನೆ.ಮಡಿಕೇರಿಗೆ 4 ಲೈನ್ ಹೈವೆ ಸಿದ್ಧಗೊಳ್ಳಲಿದೆ ಎಂದರು.

ಈ ಸಂದರ್ಭ ವಿಧಾನ ಪರಿಷತ್ತಿನ ಸದಸ್ಯ ಮರಿತಿಬ್ಬೇಗೌಡ , ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗರ್ಗ್ , ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು, ನೈರುತ್ಯ ರೈಲ್ವೆ ವಲಯ ಮತ್ತು ವಿಭಾಗೀಯ ವ್ಯವಸ್ಥಾಪಕರುಗಳು , ಸಿಬ್ಬಂದಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: