ಸುದ್ದಿ ಸಂಕ್ಷಿಪ್ತ

ಸಂಗೀತೋತ್ಸವ ‘ಜ.25 ರಿಂದ 29ರವರೆಗೆ

ಶ್ರುತಿಮಂಜರಿ ಪ್ರತಿಷ್ಠಾನ ಹಾಗೂ ರೋಟರಿ ಪಶ್ಚಿಮದಿಂದ ಹತ್ತೊಂಬತ್ತನೇ ವಾರ್ಷಿಕ ಸಂಗೀತೋತ್ಸವವು ಜ.25 ರಿಂದ 29ರವರೆಗೆ ಕಾಮಾಕ್ಷಿ ಆಸ್ಪತ್ರೆಯ ಎದುರಿರುವ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಜರುಗಲಿದೆ.

ಜ.25 (ಜ.6) : ಊತ್ತುಕಾಡು ವೆಂಕಟಸುಬ್ಬಯ್ಯರ್ ಅವರ ಕೃತಿ ಗಾಯನ – ವಿದುಷಿ.ಡಾ.ಆರ್.ಎನ್.ಲತಾ ಗಾಯನ, ವೀಣಾ ಸುರೇಶ್ ಪಿಟೀಲು, ಹೆಚ್.ಎಲ್.ಶಿವಶಂಕರಸ್ವಾಮಿ ಮೃದಂಗ ಹಾಗೂ ರಘುನಂದನ್ ಘಟ

ಜ.26 (ಸ.7) : ಕರ್ನಾಟಕ ಶಾಸ್ತ್ರೀಯ ಸಂಗೀತ – ವಿದುಷಿ ಉಮಾ ಜಿ.ಮೊನಿ, ವಿದ್ವಾನ್ ಎನ್.ಎನ್.ಗಣೇಶ್ ಕುಮಾರ್, ಎ.ರಾಧೇಶ್ ಸಾಥ್ ನೀಡುವರು.

ಜ.27(ಸ.6) : ಅಪರೂಪ ರಾಗಗಳ ರಚನೆಗಳ ಸಂಗೀತ ಕಾರ್ಯಾಗಾರ ಶಿಬಿರಾರ್ಥಿಗಳಿಂದ ಪ್ರಸ್ತುತಿ ರಂಜನ್ ಹರವೆ ಸ್ಮಾರಕ ರಾಗ ತಾನ ಪಲ್ಲವಿ ಸ್ಪರ್ಧೆ ವಿಜೇತರಿಂದ ಗಾಯನ

ಜ.28 (ಸ.6) ಕರ್ನಾಟಕ ಶಾಸ್ತ್ರೀಯ ಸಂಗೀತ – ವಿದ್ವಾನ್ ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ, ಡಾ.ಆರ್.ರಘುರಾಮ್ ಪಿಟೀಲು, ವಿನೋದ್ ಶ್ಯಾಂ ಅನೂರ್ ಮೃದಂಗ.

ಜ.29ರ ಭಾನುವಾರ ಬೆಳಿಗ್ಗೆ 10.30ಕ್ಕೆ ಹೆಸರಾಂತ ವಿದ್ವಾಂಸ ಮತ್ತು ವಿದುಷಿಯರಿಂದ

ಶ್ರೀಪುರಂದರ – ತ್ಯಾಗರಾಜರ ಆರಾಧನಾ ಮಹೋತ್ಸವ  ಹಾಗೂ ಸಂಜೆ 6ಕ್ಕೆ ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ ವಿದ್ವಾನ್ ಎಸ್.ಎ.ಶಶಿಧರ್ ಮತ್ತು ಎಸ್.ಸುಪ್ರದೀಪ್ ರಿಂದ ವೇಣುವಾದನ, ವಿದುಷಿ ನಾಗರತ್ನ ಶಶಿಧರ್ ವೀಣಾವಾದನ, ಬಿ.ಎಸ್.ರಾಮಾನುಜನ್ ಮೃದಂಗ ಹಾಗೂ ವಿದ್ವಾನ್ ವಿ.ಎಸ್.ರಮೇಶ್‍ರಿಂದ ಮೃಚ್ಛಂಗಿ ವಾದ್ಯ ಗೋಷ್ಠಿ ನಡೆಯುವುದು.

 

Leave a Reply

comments

Related Articles

error: