ಮೈಸೂರು

ಮಾ.6-9 : ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಮಹಾದಸರಾ – 2019’

ಮೈಸೂರು,ಮಾ.5:- ಕಾಲೇಜಿನ ವಾರ್ಷಿಕೋತ್ಸವವಾದ   ‘ಮಹಾದಸರಾ – 2019’  ‘ ಇದೇ ತಿಂಗಳ 6ರಿಂದ 9ರವರೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ. ಈ ವರ್ಣರಂಜಿತ ಕಾರ್ಯಕ್ರಮಕ್ಕೆ ೬ನೇ ತಾರೀಖು ಚಾಲನೆ ದೊರೆಯಲಿದೆ. ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಜಿ. ಹೇಮಂತ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಹಾರಾಜಾ ಎಜುಕೇಶನ್ ಟ್ರಸ್ಟ್ ನ  ಸದಸ್ಯರೆಲ್ಲರೂ ಉಪಸ್ಥಿತರಿರಲಿದ್ದಾರೆ. ಅಂದು ಬೆಳಿಗ್ಗೆ 11.30ಕ್ಕೆ ಹಳ್ಳಿಕಾರ್ ದನಗಳ ಜಾತ್ರೆ ಹಾಗೂ  ನುರಿತ ತಂಡದಿಂದ ದೇಸೀ ನೃತ್ಯ ಪ್ರಾಕಾರಗಳ ಭರ್ಜರಿ ಪ್ರದರ್ಶನ ನಡೆಯಲಿದೆ. 12.30 ರಿಂದ 1.15 ರವರೆಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ.

7ನೇ ತಾರೀಖು ಬೆಳಿಗ್ಗೆ 7 ಗಂಟೆಗೆ ಕಾಲೇಜಿನ ಆವರಣದಿಂದ ‘ವಾಕ್ ಫಾರ್ ಮಾರ್ಟಿಯರ್ಸ್’ ಎಂಬ ಶೀರ್ಷಿಕೆಯಡಿ 8.5 ಕಿ. ಮೀ. ಕಾಲ್ನಡಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದ್ದು ಪುರುಷ ಹಾಗೂ ಮಹಿಳಾ ಸ್ಪರ್ಧಿಗಳಿಗೆ ಪ್ರತ್ಯೇಕ ಬಹುಮಾನವಿರುತ್ತದೆ. ಮೊದಲ ಬಹುಮಾನವಾಗಿ ರೂ. 5,000 ಎರಡನೇ ಬಹುಮಾನವಾಗಿ ರೂ. 3,000 ಹಾಗೂ ಮೂರನೇ ಬಹುಮಾನವಾಗಿ ರೂ. 2,000 ನೀಡಲಾಗುವುದು. ಆಸಕ್ತ ಸ್ಪರ್ಧಿಗಳು mahadasara2019.in ವೆಬ್ಸೈಟ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

9ನೇ ತಾರೀಖು ಸಂಜೆ ಕಾಲೇಜಿನ  ಕ್ರೀಡಾಂಗಣದಲ್ಲಿ 6.30ರಿಂದ 9.30ರ ನಡುವೆ ‘ಮಿರಾಕಲ್ ಆನ್ ವೀಲ್ಸ್’ ಎಂಬ ವಿಕಲಚೇತನರ ತಂಡದಿಂದ ವಿಶೇಷ ನೃತ್ಯ ಪ್ರದರ್ಶನ ನಡೆಯಲಿದೆ.   ಗುರು ಸಾಯೇದ್ ಸಲಾಮ್ ಪಾಷಾ ಅವರ   ಹಲವು ದಾಖಲೆಗಳನ್ನು ಬರೆದಿರುವ ವಿಶ್ವವಿಖ್ಯಾತ ನೃತ್ಯ ತಂಡವಾಗಿದ್ದು  ಸದರಿ ಪ್ರದರ್ಶನವು ಕರ್ನಾಟಕದ ಇಂಜಿನಿಯರಿಂಗ್ ಕಾಲೇಜುಗಳಲ್ಲೇ ಪ್ರಪ್ರಥಮವಾಗಿದ್ದು ಇಡೀ ಮಹಾದಾಸರಾದ ಅತಿ ಮುಖ್ಯ ಆಕರ್ಷಣೆಯಾಗಿರಾಲಿದೆ. ಈ ಕಾರ್ಯಕ್ರಮಕ್ಕೂ ಸಾರ್ವಜನಿಕರಿಗೆ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ.  ಯಾವುದೇ ಕಾರ್ಯಕ್ರಮಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಪ್ರೊ. ಅನಿರುದ್ಧ ಎ. ಎಂ. ರನ್ನು ಸಂಪರ್ಕಿಸಬಹುದು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: