ಪ್ರಮುಖ ಸುದ್ದಿ

ಆಮ್ ಆದ್ಮಿ ಜೊತೆ ಕಾಂಗ್ರೆಸ್ ಮೈತ್ರಿ ಇಲ್ಲ; ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸಲಿದೆ : ಶೀಲಾ ದಿಕ್ಷಿತ್

ದೇಶ(ನವದೆಹಲಿ)ಮಾ.5:- ದೆಹಲಿಯಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಆಮ್ ಆದ್ಮಿಯೊಂದಿಗೆ ಮೈತ್ರಿ ಮಾಡಿಕೊಳ್ಳಲ್ಲ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ದೀಕ್ಷಿತ್ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೊಂದಿಗೆ ಸಭೆ ನಡೆಸಿದ ಬಳಿಕ ಶೀಲಾ ದೀಕ್ಷಿತ್ ಸ್ಪಷ್ಟಪಡಿಸಿದ್ದಾರೆ. ಮೈತ್ರಿ ಮಾಡಿಕೊಳ್ಳಲು ಪಕ್ಷದಲ್ಲಿಯೇ ಭಿನ್ನಾಭಿಪ್ರಾಯವಿತ್ತು. ದೆಹಲಿಯಲ್ಲಿ ಮೈತ್ರಿ ಮಾಡಿಕೊಳ್ಳಬೇಕೋ ಬೇಡವೋ ಎನ್ನುವ ಕುರಿತು ಸಭೆ ನಡೆಸಿದ್ದರು. ಪಕ್ಷದ ಪ್ರಮುಖರು ಆಮ್ ಆದ್ಮಿಯ ಜೊತೆ ಮೈತ್ರಿ ಮಾಡಿಕೊಳ್ಳುವುದು ಸರಿಯಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಸಭೆಯಲ್ಲಿ ಶೀಲಾ ದೀಕ್ಷಿತ್, ಪೀಸೀ ಚಾಕೋ, ಕುಲ್ಜಿತ್ ನಾಗರಾ, ಸುಭಾಷ್  ಚೋಪ್ರಾ, ಜೆಪಿ ಅಗರ್ ವಾಲ್, ಅರವಿಂದರ್ ಸಿಂಗ್, ಅಜಯ್ ಮಾಕನ್, ದೇವೇಂದ್ರ ಯಾದವ್, ರಾಜೇಶ್ ಲಿಲೋಟಿಯಾ ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: