ಮೈಸೂರು

ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಮೆರವಣಿಗೆಗೆ ಚಾಲನೆ

ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ 2015-16ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಆ ಪ್ರಯುಕ್ತ ಪ್ರಶಸ್ತಿ ಪುರಸ್ಕೃತರನ್ನು ಮೆರವಣಿಗೆಯಲ್ಲಿ ಕಲಾಮಂದಿರಕ್ಕೆ ಕರೆತರಲಾಗುತ್ತಿದ್ದು, ಚಾಲನೆ ನೀಡಲಾಯಿತು.

ಮೈಸೂರಿನ ಜೆಎಸ್ಎಸ್ ವಿದ್ಯಾಪೀಠದ ಮುಂಭಾಗ ಇರುವ ಬಸವೇಶ್ವರ ಪ್ರತಿಮೆಗೆ ಪ್ರಶಸ್ತಿಪುರಸ್ಕೃತರು ಹಾರಹಾಕಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಕೀಲುಗೊಂಬೆ, ಕಂಸಾಳೆ, ವೀರಗಾಸೆ, ಡೊಳ್ಳುಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಆಕರ್ಷಣೀಯವಾಗಿ ಮೇಳೈಸಿವೆ.

ಬಸವೇಶ್ವರ ವೃತ್ತದ ಮೂಲಕ ಸಾಗಿದ ಮೆರವಣಿಗೆಯು ರಾಮಸ್ವಾಮಿವೃತ್ತ, ಜೆಎಲ್ ಬಿ ರಸ್ತೆ, ಮೆಟ್ರೋಪೋಲ್ ಮೂಲಕ ಸಾಗಿ ಕಲಾಮಂದಿರವನ್ನು ತಲುಪಲಿದೆ. ಪ್ರಶಸ್ತಿ ಪುರಸ್ಕೃತರನ್ನು ಕುದುರೆ ಗಾಡಿಯಲ್ಲಿ ಕುಳ್ಳಿರಿಸಿ ಕರೆತರಲಾಗುತ್ತಿದೆ. ಮುಂಬರುವ ಕನ್ನಡ ಸಾಹಿತ್ಯ ಸಮ್ಮೆಳನದಲ್ಲೂ ಇದೇ ರೀತಿ ಅತಿಥಿಗಳನ್ನು ಕರೆ ತರುವ ಆಶಯವನ್ನು ಕರ್ನಾಟಕ ನಾಟಕ ಅಕಾಡೆಮಿ ವ್ಯಕ್ತಪಡಿಸಿದೆ.

ಪ್ರಶಸ್ತಿ ಪುರಸ್ಕೃತರಾದ ಮನುಬಾಯಿ ನಾಕೋಡ,  ಮಧುಕೇಶ ಚಿಂದೋಡಿ, ಗೂಡುಸಾಹೇಬ ಚಟ್ನಿಹಾಳ, ಮಮತಾ ಗುಡೂರು, ದೇವಿರಪ್ಪ ಶಿವಪ್ಪ ಬಣಕಾರ, ವೆಂಕಟೇಶ್ ಕುಲಕರ್ಣಿ, ಕೆ.ವಿ.ಕೃಷ್ಣಯ್ಯ, ಪೂಜಾರ ಚಂದ್ರಪ್ಪ, ರಾಮಚಂದ್ರರಾವ್ ಟಿ.ಆರ್, ವೆಂಕಟೇಶ್ ಕೆ.ವಿ, ಸೂರಯ್ಯ ಎಸ್.ಕೆ, ಸರೋಜಿನಿ, ವಿಠಲ ಕೊಪ್ಪದ, ಕಿಶೋರ್ ಡಿ.ಶೆಟ್ಟಿ, ಚಂದ್ರು ಉಡುಪಿ, ಮಾನಮ್ಮ ರಾಯನ ಗೌಡ, ವನಜಶ್ರೀ ಶೆಟ್ಟಿ, ತಿಪ್ಪೇಸ್ವಾಮಿ ಬಿ.ಇ, ಪರಶುರಾಮ ಪ್ರಿಯ ಇವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.

ಸೋಮವಾರ ಮಧ್ಯಾಹ್ನ 3ಗಂಟೆಗೆ ಕಲಾಮಂದಿರದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

Leave a Reply

comments

Related Articles

error: