ಕ್ರೀಡೆ

ಗಂಗೂಲಿ ದಾಖಲೆ ಮುರಿದ ಕೊಹ್ಲಿ

ನಾಗ್ಪುರ,ಮಾ.6-ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದಿದ್ದಾರೆ.

ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ವಿರಾಟ್ ಕೊಹ್ಲಿ, ಗಂಗೂಲಿ ದಾಖಲೆಯನ್ನು ಮುರಿದಿದ್ದಾರೆ. ಇದು ಏಕದಿನದಲ್ಲಿ ಕೊಹ್ಲಿಗೆ ಲಭಿಸಿರುವ 32ನೇ ಪಂದ್ಯಶ್ರೇಷ್ಠ ಪ್ರಶಸ್ತಿ ಗೌರವಾಗಿದೆ. ದಾದಾ ತಮ್ಮ ಕೆರಿಯರ್ನಲ್ಲಿ 31 ಬಾರಿ ಮ್ಯಾನ್ ಆಫ್ ದಿ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದರು.

ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿರುವ ಸಚಿನ್ ದಾಖಲೆಯ 62 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದಾರೆ. ಇನ್ನು ಮಹೇಂದ್ರ ಸಿಂಗ್ ಧೋನಿ 20 ಬಾರಿ ಏಕದಿನದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹವಾಗಿದ್ದಾರೆ.

ವಿಶ್ವ ಕ್ರಿಕೆಟನ್ನು ಪರಿಗಣಿಸಿದರೆ ಸಚಿನ್ ಹೊರತಾಗಿ ಸನತ್ ಜಯಸೂರ್ಯ (48) ಮಾತ್ರ ವಿರಾಟ್ ಕೊಹ್ಲಿ ಮುಂದಿದ್ದಾರೆ. ಇನ್ನು ಜಾಕ್ವಾಸ್ ಕ್ಯಾಲಿಸ್ (32), ರಿಕಿ ಪಾಂಟಿಂಗ್ (32) ಹಾಗೂ ಶಾಹೀದ್ ಆಫ್ರಿದಿ (32) ದಾಖಲೆಯನ್ನು ವಿರಾಟ್ ಸರಿಗಟ್ಟಿದ್ದಾರೆ.

ಏಕದಿನದಲ್ಲಿ ಭಾರತದ ಪರ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಗೌರವ: ಸಚಿನ್ ತೆಂಡೂಲ್ಕರ್ 62 (463 ಪಂದ್ಯಗಳು), ವಿರಾಟ್ ಕೊಹ್ಲಿ 32 (224 ಪಂದ್ಯಗಳು), ಸೌರವ್ ಗಂಗೂಲಿ 31 (308 ಪಂದ್ಯಗಳು), ಯುವರಾಜ್ ಸಿಂಗ್ 27 (301 ಪಂದ್ಯಗಳು), ವೀರೇಂದ್ರ ಸೆಹ್ವಾಗ್ 23 (241 ಪಂದ್ಯಗಳು), ಎಂಎಸ್ ಧೋನಿ 20 (337 ಪಂದ್ಯಗಳು).

ದ್ವಿತೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಸೆಂಚುರಿ ಸಹಾಯದಿಂದ ಭಾರತ ಗೆಲುವು ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ. ಇದು ಏಕದಿನದಲ್ಲಿ ಭಾರತದ ಐತಿಹಾಸಿಕ 500ನೇ ಗೆಲುವಾಗಿದೆ. ಏಕಾಂಗಿ ಹೋರಾಟ ನೀಡಿದ ಕ್ಯಾಪ್ಟನ್ ಕೊಹ್ಲಿ 120 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 116 ರನ್ ಗಳಿಸಿದ್ದರು. ಮೂಲಕ ಅನೇಕ ದಾಖಲೆಯನ್ನು ಪುಡಿಗಟ್ಟಿದ್ದಾರೆ. (ಎಂ.ಎನ್)

Leave a Reply

comments

Related Articles

error: