ಮೈಸೂರು

ಆಗಸ್ಟ್ 25: ‘ಡಾ.ಎಚ್ಚೆಸ್ಕೆ ಒಂದು ನೆನಪು’ ನುಡಿ ನಮನ, ಪ್ರಶಸ್ತಿ ಪ್ರದಾನ

ಚಲಿಸುವ ವಿಶ್ವಕೋಶ ‘ಡಾ.ಎಚ್ಚೆಸ್ಕೆ – ಒಂದು ನೆನಪು’ ನುಡಿ ನಮನ ಕಾರ್ಯಕ್ರಮವನ್ನು ಕರ್ನಾಟಕ ವೈದ್ಯ ಸಾಹಿತ್ಯ ಪರಿಷತ್ ಹಾಗೂ ವೈದ್ಯ ವಾರ್ತಾ ಪ್ರಕಾಶನದ ಸಹಯೋಗದೊಂದಿಗೆ ಏರ್ಪಡಿಸಲಾಗಿದೆ.

ಆಗಸ್ಟ್ 26ರ ಶುಕ್ರವಾರ ಬೆಳಿಗ್ಗೆ 10:30ಕ್ಕೆ ನಗರದ ಮೂಡಾ ಕಛೇರಿ ಪಕ್ಕದ ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಆವರಣದಲ್ಲಿ ಆಯೋಜಿಸಿದ್ದು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಮೈಸೂರು ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಸ್ಥೆಯ ಅಧ್ಯಕ್ಷ  ಎ.ಎಸ್. ಸತೀಶ್ ವಹಿಸುವರು.

ಮುಖ್ಯ ಅತಿಥಿಯಾಗಿ ಅರಸು ಚಿಂತಕರ ಚಾವಡಿ ಅಧ್ಯಕ್ಷ ಕೆಂಪರಾಜೇ ಅರಸ್ ಉಪಸ್ಥಿತರಿರುವರು, ಅರಸು ಜಾಗೃತಿ ಅಕಾಡೆಮಿ ಅಧ್ಯಕ್ಷ ಎನ್. ಪಾರ್ಥ ಸಾರಥಿರಾಜೆ ಅರಸ್, ಡಾ. ಎಚ್ಚೆಸ್ಕೆ ಭಾವಚಿತ್ರ ಅನಾವರಣಗೊಳಿಸುವರು. ಕರ್ನಾಟಕ ವೈದ್ಯ ಸಾಹಿತ್ಯ ಪರಿಷತ್ನ ಡಾ. ಸಿ. ಶರತ್ ಕುಮಾರ್ ಹಾಗೂ ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ನಟರಾಜ ಜೋಯಿಸ್ ಇವರುಗಳಿಂದ ಪುಣ್ಯ ಸ್ಮರಣೆ, ಹಿರಿಯ ಸಾಹಿತಿ ಮತ್ತು ವಿಮರ್ಶಕ ಪೊ. ಕೆ. ಭೈರವಮೂರ್ತಿಗೆ ಡಾ.ಎಚ್ಚೆಸ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಡಾ. ಎಚ್ಚೆಸ್ಕೆ ಗೌರವ ಪ್ರಶಸ್ತಿ: ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಸಾಧಕರುಗಳನ್ನು ಗುರುತಿಸಿ ಡಾ. ಎಚ್ಚೆಸ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು ಪ್ರಸಕ್ತ ಸಾಲಿನಲ್ಲಿ ಸುವಿಖ್ಯಾತ ಘಟಂ ಮಾಸ್ಟರ್ ಮೂಗೂರು ರವೀಂದ್ರ ಕುಮಾರ್, ಅಂಕಣ ಸಾಹಿತ್ಯ ಕ್ಷೇತ್ರದ  ಬನ್ನೂರು ಕೆ.ರಾಜು, ಮಹಿಳಾ ಅಭಿವೃದ್ಧಿ ಕ್ಷೇತ್ರದ  ಎ.ವಿ.ವಿದ್ಯಾ ಅರಸ್, ಖ್ಯಾತ ಕೈಗಾರಿಕೋದ್ಯಮಿ ಹೆಚ್.ಎಂ.ಟಿ. ಲಿಂಗರಾಜೇ ಅರಸ್, ರಾಜ್ಯ ಮಟ್ಟದ ಅರಸು ಪ್ರಶಸ್ತಿ ಪುರಸ್ಕೃತೆ ಕೆ.ಸಿ.ಮಂಜುಳ, ಸುಗಮ ಸಂಗೀತ ಕ್ಷೇತ್ರದ ನಾಗೇಶ್ ಕಂದೇಗಾಲ, ಬೆಂಗಳೂರಿನ ಪಾರಂಪರಿಕ ವೈದ್ಯರ ಕ್ಷೇತ್ರದ ಡಾ.ವೈ.ಹೆಚ್. ಇನಾಯತ್ ಪಾಷ ಹಾಗೂ ಆಚಾರ್ಯ ಶಿಕ್ಷಣ ಸಂಸ್ಥೆಯ ನಿದೇರ್ಶಕ ಸಿ.ನಂಜುಂಡ ಆರಾಧ್ಯ ಇವರುಗಳಿಗೆ ಡಾ. ಎಚ್ಚೆಸ್ಕೆ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ವೈದ್ಯ ಸಾಹಿತ್ಯ ಪರಿಷತ್ನ ಉಪಾಧ್ಯಕ್ಷ ಡಾ.ಎಸ್. ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಿದ್ದಾರೆ.

Leave a Reply

comments

Related Articles

error: