ಮೈಸೂರು

ಬಲಿಷ್ಠ ಭಾರತದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು : ಚಂದ್ರಶೇಖರ

ಸುಭಾಷ್ ಚಂದ್ರ ಬೋಸ್ ರವರು ಕಂಡಿದ್ದ ಬಲಿಷ್ಠ ಭಾರತ ನಿರ್ಮಾಣದ ನಿಟ್ಟಿನಲ್ಲಿ ಎಲ್ಲರೂ ತೊಡಗಿಸಿಕೊಳ್ಳುವಂತೆ ಎಐಡಿಎಫ್ಒ ಕಾರ್ಯಕರ್ತ ಚಂದ್ರಶೇಖರ ಹೇಳಿದರು.
ಮೈಸೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ (ಸುಬ್ಬರಾಯನಕೆರೆ ಮೈದಾನ) ಎಐಡಿಎಫ್‍ಒ ವತಿಯಿಂದ ಆಯೋಜಿಸಿದ್ದ ಡಾ.ಸುಭಾಷ್ ಚಂದ್ರ ಬೋಸ್‍ರವರ 120ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬೋಸ್‍ರವರು ರಾಷ್ಟ್ರಪಿತ ಮಹಾತ್ಮಾ ಗಾಂಧೀಯವರೊಂದಿಗೆ ಸೇರಿ ದೇಶದ ಸ್ಥಿತಿಗತಿ ಹಾಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ಸಮಾಲೋಚನೆ ನಡೆಸಿದರು. ಅಸಹಕಾರ ಚಳವಳಿ, ಶಾಂತಿಯುತ ಹೋರಾಟಗಳ ಮೂಲಕ ಸ್ವಾತಂತ್ರ್ಯ ಸಿಗಲಾರದು ಎಂದು ತೀರ್ಮಾನ ಕೈಗೊಂಡು ಬಂಗಾಳಕ್ಕೆ ತೆರಳಿ ಅಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೇಶಬಂಧು, ಚಿತ್ತರಂಜನದಾಸ್ ರವರೊಂದಿಗೆ ಒಡನಾಟ ಬೆಳೆಸಿಕೊಳ್ಳುವುದರ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ದಿಸೆಯಲ್ಲಿ ಅಪಾರ ಪ್ರಯತ್ನಗಳನ್ನು ಮಾಡಿದರು. ಇಂತಹ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರನ್ನು ನಾವೆಲ್ಲರೂ ನೆನಪು ಮಾಡಿಕೊಳ್ಳುವುದನ್ನು ಮರೆಯಬಾರದೆಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಜಾಥಾವನ್ನು ಆಯೋಜಿಸಲಾಗಿತ್ತು. ಜಾಥಾದಲ್ಲಿ ಸುಭಾಷ್ ಚಂದ್ರ ಬೋಸ್‍ ಸ್ವಾತಂತ್ರ್ಯ ಕುರಿತು ಹೇಳಿದ ಘೋಷಣೆಗಳನ್ನುಳ್ಳ ಭಿತ್ತಿಪತ್ರಗಳನ್ನು ಹಿಡಿದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಜಾಥಾವು ಸುಬ್ಬರಾಯನ ಕೆರೆ ಮೈದಾನದಿಂದ ಹೊರಟು ಚಾಮರಾಜ ಜೋಡಿ ರಸ್ತೆ, ಜೆಎಲ್‍ಬಿ ರಸ್ತೆ, ದೇವರಾಜ ಅರಸು ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆಗಳ ಮೂಲಕ ಹಾದು ಮತ್ತೆ ಸುಬ್ಬರಾಯನಕರೆ ಮೈದಾನಕ್ಕೆ ಬಂದು ಸಮಾಪ್ತಿಗೊಂಡಿತು.

Leave a Reply

comments

Related Articles

error: