ಕ್ರೀಡೆಮೈಸೂರು

ಮಹಾಜನ ಪ್ರಥಮ ದರ್ಜೆ ಕಾಲೇಜಿಗೆ ಶಟಲ್ ಬ್ಯಾಡ್ಮಿಂಟನ್‍ನಲ್ಲಿ ಪ್ರಥಮ ಸ್ಥಾನ

ಮೈಸೂರು,ಮಾ.6:- ಶಂಕರೇಗೌಡ ಬಿ.ಎಡ್. ಕಾಲೇಜು, ಮಂಡ್ಯ ಇವರು ಆಯೋಜಿಸಿದ್ದ, ಮೈಸೂರು ವಿಶ್ವವಿದ್ಯಾನಿಲಯ ಪುರುಷರ ಅಂತರ ಕಾಲೇಜು ಅಂತರ ವಲಯ ಶಟಲ್ ಬ್ಯಾಡ್ಮಿಂಟನ್‍ನಲ್ಲಿ ಎಸ್ ಬಿ ಆರ್ ಆರ್ ಮಹಾಜನ ಕಾಲೇಜಿನ ವಿದ್ಯಾರ್ಥಿಗಳು  ಪ್ರಥಮಸ್ಥಾನ ಪಡೆದಿರುತ್ತಾರೆ.

ತಂಡದ ನಾಯಕ ಅಭಿಅಮುದನ್  ನೇತೃತ್ವದಲ್ಲಿ ನಡೆದ ಪಂದ್ಯದಲ್ಲಿ ಸೋಮಶೇಖರ್ ಕೆ., ಗೋವರ್ಧನ್ ಸಾಗರ್, ಭರತ್ ಭಾರಧ್ವಜ್ ಮತ್ತು ಪ್ರವೀಣ್‍ಕುಮಾರ್ ಅವರು ವಿಜೇತರಾಗಿದ್ದು,  ಕ್ರೀಡಾ ಸಮಿತಿ ಸದಸ್ಯ ಡಾ. ಸೋಮಶೇಖರ್ ಕೆ.ಕೆ.,  ದೈಹಿಕ ಶಿಕ್ಷಣ ನಿರ್ದೇಶಕರಾದ ಮಧುಸೂದನ್, ಡಾ. ಭಾಸ್ಕರ್ ಹೆಚ್.ಎನ್.,  ಪ್ರಾಂಶುಪಾಲರಾದ   ಡಾ. ಎಸ್. ವೆಂಕಟರಾಮು,  ಗೌ. ಕಾರ್ಯದರ್ಶಿಗಳು, ಡಾ. ವಿಜಯಲಕ್ಷ್ಮಿ ಮುರಳೀಧರ್,   ಕಾರ್ಯನಿರ್ವಹಣಾಧಿಕಾರಿ ಡಾ. ಎಸ್.ಆರ್. ರಮೇಶ್,  ಕ್ರೀಡಾ ಸಮಿತಿ ಸದಸ್ಯೆ  ವಾಣಿ ಅಭಿನಂದಿಸಿದ್ದಾರೆ.   (ಎಸ್.ಎಚ್)

Leave a Reply

comments

Related Articles

error: