ಪ್ರಮುಖ ಸುದ್ದಿಮೈಸೂರು

 ಪಾಕಿಸ್ತಾನ ನೇರವಾಗಿ ನಮ್ಮ ಜೊತೆ ಯುದ್ಧ ಮಾಡುತ್ತಿಲ್ಲ ಭಯೋತ್ಪಾದಕರ ಮೂಲಕ ಯುದ್ಧ ಮಾಡಿಸ್ತಾ ಇದೆ : ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿ

ಮೈಸೂರು,ಮಾ.6:-  ಪಾಕಿಸ್ತಾನ ನೇರವಾಗಿ ನಮ್ಮ ಜೊತೆ ಯುದ್ಧ ಮಾಡುತ್ತಿಲ್ಲ. ಭಯೋತ್ಪಾದಕರ ಮೂಲಕ ಯುದ್ಧ ಮಾಡಿಸ್ತಾ ಇದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿಕಾರಿದ್ದಾರೆ.

ಅವರಿಂದು ಜೆ.ಕೆ.ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿ ಭಾರತದ ಯುವಕರು  ಭಯೋತ್ಪಾದಕರ ಗುಂಪು ಸೇರುತ್ತಿಲ್ಲ ಇದು ಸಂತಸದ ವಿಚಾರ. ಎಲ್ಲಾ ದೇಶದಲ್ಲೂ ಟೆರರಿಸಮ್ ಭೀತಿ ಇದೆ. ಕೆಲವು ದೇಶದಲ್ಲಿ ಹೆಚ್ಚಾಗಿದೆ. ಭಾರತ ಎರಡು ರೀತಿಯ  ಭಯೋತ್ಪಾದಕರಿಂದ ಕಷ್ಟ ಅನುಭವಿಸುತ್ತಿದೆ. ಒಂದು ಪಾಕಿಸ್ತಾನದ ಟೆರರಿಸ್ಟ್ ಗಳು. ಮತ್ತೊಂದು ಭಾರತದ ಒಳಗಿರುವ ರೆಡ್ ಕಾರಿಡರ್ ಟೆರರಿಸ್ಟ್ ಗಳು. ಇವರುಗಳು ಬೆಂಗಳೂರಿಗೂ ಬರುವ ಸಾಧ್ಯತೆ ಇದೆ ಎಂದರು.

ಏರ್ ಸ್ಟ್ರೈಕ್ ಬಗ್ಗೆ ನಮ್ಮವರೇ  ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಎಷ್ಟು ಜನರನ್ನು ಕೊಂದಿರಿ ಎಂದು ಕೇಳುತ್ತಿದ್ದಾರೆ. 26/11 ದಾಳಿಗೆ ಆಗ ಪ್ರತಿಕ್ರಿಯೆ ನೀಡಲಿಲ್ಲ. ಪುಲ್ವಾಮ ದಾಳಿಯಾದ ನಂತರ ಕೇವಲ 10 ದಿನದಲ್ಲೇ ಉತ್ತರ ಕೊಟ್ಟಿದ್ದೇವೆ. ಇದಕ್ಕೆ ದೇಶವು ನಮ್ಮ ವಿರುದ್ಧ  ಮಾತನಾಡುತ್ತಿಲ್ಲ. ಎಲ್ಲರೂ ನಮ್ಮ ಪರವಾಗಿ ಮಾತನಾಡುತ್ತಿದ್ದಾರೆ. ಮೋದಿಯ ವಿದೇಶ ಪ್ರವಾಸವನ್ನು ಪ್ರಶ್ನೆ‌ ಮಾಡ್ತಾ ಇದ್ದರು. ಆದರೆ ಆ ವಿದೇಶ ಪ್ರವಾಸದಿಂದ ಎಲ್ಲಾ ನಮಗೆ ಬೆಂಬಲ ಕೊಡುತ್ತಿದ್ದಾರೆ. ಭಯೋತ್ಪಾದನೆ ಸಂಪೂರ್ಣವಾಗಿ ನಿಲ್ಲುತ್ತದೆ ಎಂದು ಹೇಳುವುದಿಲ್ಲ. ಇಂತಹ ನಮ್ಮ ಪ್ರತಿದಾಳಿಯಿಂದ ಈ ಮೂಲಕ ನಾವು ಸುಮ್ಮನೆ ಕೂರುವುದಿಲ್ಲ ಎಂಬ ಸಂದೇಶ ಕೊಟ್ಟಂತಾಗುತ್ತೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: