ಮೈಸೂರು

ಮರಳು ಅಡ್ಡೆ ಮೇಲೆ ದಾಳಿ: ವಾಹನ ವಶ

ಮೈಸೂರು,(ನಂಜನಗೂಡು),ಮಾ.7-ಅಕ್ರಮ ಮರಳು ಸಾಗಣೆ ಅಡ್ಡೆ ಮೇಲೆ ಬಿಳಿಗೆರೆ ಪೊಲೀಸರು ದಾಳಿ ಮಾಡಿ ಮರಳು ತುಂಬಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಮರಳು ಗಣಿಗಾರಿಕೆಯಲ್ಲಿ ನಿರತರಾಗಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ.

ತಾಲೂಕಿನ ಮೂಡಹಳ್ಳಿ ಗ್ರಾಮದ ಕಪಿಲಾ ನದಿ ತೀರದಲ್ಲಿ ರಾತ್ರಿ ವೇಳೆ ಅಕ್ರಮ ಮರಳು ಸಾಗಣೆಯಲ್ಲಿ ನಿರತರಾಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಿಳಿಗೆರೆ ಪಿಎಸ್ಐ ಯಶ್ವಂತ್ ಕುಮಾರ್ ದಾಳಿ ನಡೆಸಿದ್ದರು. ಸರಕು ಸಾಗಣೆ ವಾಹನಕ್ಕೆ ಮರಳು ತುಂಬುತ್ತಿರುವುದು ಈ ವೇಳೆ ಗಮನಕ್ಕೆ ಬಂದಿದೆ. ಪೊಲೀಸರ ದಾಳಿಯಿಂದ ದೇವನೂರಿನ ರಘು ಹಾಗೂ ಮೂಡಹಳ್ಳಿಯ ಬಾಲರಾಜ್ ಎಂಬವವರು ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಕೆ.ಎಸ್, ಎಂ.ಎನ್)

Leave a Reply

comments

Related Articles

error: