ಮೈಸೂರು

ವಿಶಿಷ್ಟ ಭರತನಾಟ್ಯ ಕಾರ್ಯಕ್ರಮ ‘ನೃತ್ಯೋಪಾಸನ-2017’; ಜ. 27-28

ಕಲಾ ಸಂದೇಶ ಪ್ರತಿಷ್ಠಾನದಿಂದ “ನೃತ್ಯೋಪಾಸನ-2017” ವಿಶಿಷ್ಟ ಭರತನಾಟ್ಯ ಕಾರ್ಯಕ್ರಮವನ್ನು ಇದೇ ಜ.27 ರಿಂದ 28ರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟಿ ರಾಧಿಕಾ ಎಸ್.ಭಾರ್ಗವ್ ಅವರು ಪತ್ರಕರ್ತರ ಭವನದಲ್ಲಿ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.27ರಂದು ಸಂಜೆ 5.45ಕ್ಕೆ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ಉದ್ಯಮಿ ಕೆ.ವಿ.ಮೂರ್ತಿ ಚಾಲನೆ ನೀಡಲಿದ್ದು, ಭರತನಾಟ್ಯ ಕಲಾವಿದೆ ಮಿತ್ರಾ ನವೀನ್ ಹಾಗೂ ತಿ.ನರಸೀಪುರದ ವಿದ್ಯೋದಯ ಕಾಲೇಜಿನ ಡಾ.ಸಿ.ಜಿ.ಉಷಾದೇವಿ ಉಪಸ್ಥಿತರಿರುವರು. ಪ್ರತಿಷ್ಠಾನದ ಅಧ್ಯಕ್ಷ ಡಾ.ಡಿ.ಉಮಾಪತಿ ಅಧ್ಯಕ್ಷತೆ ವಹಿಸುವರು. ನಂತರ ಅನುಷಾ ಮತ್ತು ಅಕ್ಷತಾ ಅಡಿಗರಿಂದ ಭರತನಾಟ್ಯ ಮಾರ್ಗ ನೃತ್ಯ ಕಾರ್ಯಕ್ರಮವಿರುವುದು ಎಂದರು.

27ರ ಶುಕ್ರವಾರ ಸಂಜೆ 5 ಗಂಟೆಗೆ ಕಲಾಮಂದಿರದಲ್ಲಿ ಕಲಾಸಂದೇಶ.ಕಾಂ ವೆಬ್‍ಸೈಟ್‍ ಉದ್ಘಾಟನೆ ಹಾಗೂ ವಿವಿಧ ಶಾಖೆಗಳ ಕಿರಿಯ ಕಲಾವಿದರಿಂದ ಭರತನಾಟ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜ.28ರ ಶನಿವಾರ ಸಂಜೆ 5.45ಕ್ಕೆ ಗಾನಭಾರತಿ ವೀಣೆಶೇಷಣ ಸಭಾಂಗಣದಲ್ಲಿ ಪ್ರತಿಷ್ಠಾನದ ಯುವ ಕಲಾವಿದರಿಂದ ‘ಚಿಂತನ ರಾಮಾಯಣ’ ನೃತ್ಯರೂಪವಿದ್ದು ಕೆ.ಸಂದೇಶ್ ಭಾರ್ಗವ್ ಅವರು ನೃತ್ಯ ಸಂಯೋಜಿಸಿದ್ದಾರೆ ಎಂದರು.

ತಲಕಾಡು, ಕೊಳ್ಳೇಗಾಲ ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 20 ಶಾಖೆಗಳನ್ನು ಸಂಸ್ಥೆಯು ಹೊಂದಿದ್ದು ಪ್ರತಿ ತಿಂಗಳೂ ನಗರದ ವಿವಿಧ ನೃತ್ಯ ಶಾಲೆಗಳ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಪೂಜಾ ದೇವ್, ಹರಿಕೃಷ್ಣನ್, ಶೃತಿ ಹಾಗೂ ಅಕ್ಷತಾ ಅಡಿಗ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: