ಪ್ರಮುಖ ಸುದ್ದಿಮೈಸೂರು

ಮಾ.10ರಂದು ಚಲನಚಿತ್ರದ ಅಡಿಷನ್

ಮೈಸೂರು, ಮಾ.7 : ರಾವಲ್ ಸಿನಿ ಫೋಕಸ್ ವತಿಯಿಂದ ನಿರ್ಮಿಸಲಾಗುತ್ತಿರುವ ಹೊಸ ಚಿತ್ರಕ್ಕೆ ಕಲಾವಿದರು, ಗಾಯಕರು, ನೃತ್ಯ ಸಂಯೋಜಕರು ಮತ್ತು ತಾಂತ್ರಿಕ ವರ್ಗದವರು ಬೇಕಾಗಿದ್ದು, ಸ್ಟಾರ್ ಕರ್ನಾಟಕ ನೆವ್ಸ್ ವಾಹಿನಿಯ ಸ್ಟುಡಿಯೊದಲ್ಲಿ ಮಾರ್ಚ್  10ರಂದು ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆ ಅಡಿಷನ್ ನಡೆಸಲಾಗುವುದು ಎಂದು ಚಿತ್ರದ ನಿರ್ದೇಶಕ ಮಹೇಶ್ ರಾವಲ್ ತಿಳಿಸಿದರು.

ಈಗಾಗಲೇ ರಾವಲ್ ಸಿನಿ ಫೋಕಸ್ ನಿರ್ಮಾಣ ಸಂಸ್ಥೆಯಿಂದ ನಿರ್ಮಿಸಲಾಗಿದ್ದ ‘ಚರಂತಿ’ ಚಲನಚಿತ್ರ ಸಿನಿಪ್ರಿಯರ ಮೆಚ್ಚುಗೆ ಗಳಿಸಿತ್ತು. ಈಗ 2ನೇ ಚಿತ್ರ ನಿರ್ಮಿಸಲಾಗುತ್ತಿದ್ದು, ಚಿತ್ರದಲ್ಲಿ ನಟಿಸಲು ಯುವ ಪ್ರತಿಭೆಗಳಿಗೆ ಆದ್ಯತೆ ನೀಡಲಾಗುವುದು. ಅಡಿಷನ್‌ನಲ್ಲಿ ಭಾಗವಹಿಸಲು ಇಚ್ಚಿಸುವವರು ಮೊ: 8150866230 ಸಂಪರ್ಕಿಸಬಹುದು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಿರೂಪಕ ಮಿಂಚು ಸುದ್ದಿಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: