ಸುದ್ದಿ ಸಂಕ್ಷಿಪ್ತ

ಮಾರ್ಚ್ 8 ರಂದು ವಿಶ್ವ ಶ್ರವಣ ದಿನ ಪ್ರಯುಕ್ತ ಜಾಗೃತಿ ಜಾಥಾ

ಮಂಡ್ಯ (ಮಾ.7): ಮಾರ್ಚ್ 8 ರಂದು ವಿಶ್ವ ಶ್ರವಣ ದಿನ ಪ್ರಯುಕ್ತ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಬೆಳಿಗ್ಗೆ 10.30 ಗಂಟೆಗೆ ಮಂಡ್ಯ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಕಛೇರಿಯಿಂದ ಆರಂಭಿಸಿ ಫ್ಯಾಕ್ಟರಿ ಸರ್ಕಲ್, ನಂದಾ ಥಿಯೆಟರ್ ಸರ್ಕಲ್‍ನಿಂದ ಡಿ.ಹೆಚ್.ಓ ಕಛೇರಿವರೆಗೆ ಹಮ್ಮಿಕೊಳ್ಳಲಾಗಿದೆ.

ನಂತರ ಜಿಲ್ಲಾ ಮಟ್ಟದ ವೇದಿಕೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಮಂಚೇಗೌಡ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: