ಸುದ್ದಿ ಸಂಕ್ಷಿಪ್ತ

ವಿಶ್ವ ಮಹಿಳಾ ದಿನಾಚರಣೆ : ವಿಚಾರ ಸಂಕಿರಣ ನಾಳೆ

ಮೈಸೂರು,ಮಾ.7 : ಕನ್ನಡ ಜಾನಪದ ಪರಿಷತ್, ಶ್ರಿನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ಸಬಲೀಕರಣ ಮತ್ತು ಮಹಿಳಾ ದೌರ್ಜನ್ಯ ತಡೆಗಟ್ಟುವ ಸಮಿತಿ ಸಹಯೋಗದಲ್ಲಿ ‘ವಿಶ್ವ ಮಹಿಳಾ ದಿನಾಚರಣೆ 2019 ಹಾಗೂ ಪರಿಷತ್ ಸಂಸ್ಥಾಪನಾ ದಿನಾಚರಣೆಯನ್ನು ನಾಳೆ ಬೆಳಗ್ಗೆ 11 ಗಂಟೆಗೆ ಹೊಸಮಠದ ನಟರಾಜ ಸಭಾಭವನದಲ್ಲಿ ಏರ್ಪಡಿಸಲಾಗಿದೆ.

ನಟರಾಜ ಪ್ರತಿಷ್ಠಾನದ ಶ್ರೀಚಿದಾನಂದಸ್ವಾಮೀಜಿ ಇರುವರು, ಪರಿಷತ್ ಅಧ್ಯಕ್ಷ ಡಾ.ಎಸ್.ಬಾಲಾಜಿ ಉದ್ಘಾಟಿಸುವರು, ನಟರಾಜ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಶಾರದಾ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಧ್ಯಾಪಕಿ ಡಾ.ಕೆ.ಸೌಭಾಗ್ಯವತಿ ಮುಖ್ಯ ಭಾಷಣ ಮಾಡುವರು, ಪರಿಷತ್ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡುವರು, ಹಲವು ಗಣ್ಯರು ಇರಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: