ಮೈಸೂರು

ಸ್ವಚ್ಛನಗರಿ ಬಿರುದಿಗೆ ಶ್ರಮಿಸಿದ ಪೌರಕಾರ್ಮಿಕರಿಗೆ ಸನ್ಮಾನ

ಮೈಸೂರು,ಮಾ.8-2018-19ನೇ ಸಾಲಿನ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ದೇಶದ ಸ್ವಚ್ಛ ನಗರಗಳ ಪೈಕಿ ಮೂರನೇ ಸ್ಥಾನ ಪಡೆಯಲು ಶ್ರಮಿಸಿ ಪೌರಕಾರ್ಮಿಕರನ್ನು ಮಹಾಪೌರರಾದ ಪುಷ್ಪಲತಾ ಜಗನ್ನಾಥ್ ಸನ್ಮಾನಿಸಿದರು.

ನಗರದ ಚಿಕ್ಕಗಡಿಯಾರದ ಮುಂಭಾಗ ಶುಕ್ರವಾರ ಪೌರಕಾರ್ಮಿಕರಿಗೆ ಹೂಗುಚ್ಛ ನೀಡಿ ಸಿಹಿ ವಿತರಿಸಿ ಕೃತಜ್ಞತೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಪುಷ್ಪಲತಾ ಜಗನ್ನಾಥ್, ಮೈಸೂರು ದೇಶದ ಸ್ವಚ್ಛನಗರಗಳಲ್ಲಿ 3ನೇ ಸ್ಥಾನ ಬರೋದು ಸುಲಭದ ಮಾತಲ್ಲ.ಸ್ವಚ್ಚನಗರಿ ಪಟ್ಟ ಪಡೆಯಲು ಪೌರಕಾರ್ಮಿಕರ ಶ್ರಮ ಕೂಡ ಮುಖ್ಯ. ಕಳೆದ ಬಾರಿ 8 ಸ್ಥಾನದಲ್ಲಿದ್ದ ಮೈಸೂರು ಈ ಬಾರಿ 3ನೇ ಸ್ಥಾನದಲ್ಲಿದೆ. ಮುಂದಿನ ಸಾಲಿನಲ್ಲಿ ನಾವೇ ನಂ.1 ಸ್ಥಾನ ಪಡೆಯಲು ಶ್ರಮಿಸುತ್ತೇವೆ ಎಂದರು.

ಮೈಸೂರಿಗೆ ಮೂರನೇ ಸ್ಥಾನ ಬಂದಿರೋದು ನಮಗೆ ಖುಷಿ ತಂದಿದೆ. ನಾವು ಸ್ವಚ್ಛತೆಗಾಗಿ ಕೆಲಸ ಮಾಡಿದ್ದು ಸಾರ್ಥಕವಾಗಿದೆ. ಮೇಯರ್ ನಮ್ಮೊಟ್ಟಿಗೆ ಸಿಹಿ ಹಂಚಿ ನಮ್ಮ ಕೆಲಸಕ್ಕೆ ಗೌರವ ಸಲ್ಲಿಸಿದ್ದಾರೆ. ಮುಂದೆ ನಾವು ನಮ್ಮ ಕೆಲಸವನ್ನ ಜವಬ್ದಾರಿಯಿಂದ ಮಾಡಿ ಮೊದಲ ಸ್ಥಾನ ಬರಲು ಪ್ರಯತ್ನಿಸುತ್ತೇವೆ ಎಂದು ಪೌರಕಾರ್ಮಿಕರು ಹೇಳಿದರು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಸತೀಶ್, ಎಂ.ಬಿ.ನಾಗರಾಜ್, ರಮಣಿ, ಡಾ.ನಾಗರಾಜು, ಅಧಿಕಾರಿಗಳಾದ ಮೈತ್ರಿ, ಶಾಹೀತ್ ಇತರರು ಉಪಸ್ಥಿತರಿದ್ದರು. (ಕೆ.ಎಸ್, ಎಂ.ಎನ್)

Leave a Reply

comments

Related Articles

error: