ಕರ್ನಾಟಕ

ಸುಮಲತಾ ಅಂಬರೀಶ್ ಬಗ್ಗೆ ಡಿಸಿ ತಮ್ಮಣ್ಣ ಹೇಳಿಕೆ: ಅಂಬರೀಶ್ ಸಂಬಂಧಿಕರ ಆಕ್ರೋಶಕ್ಕೆ ಗುರಿ

ಮಂಡ್ಯ,ಮಾ.8-ಮಂಡ್ಯ ಲೋಕಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದ್ದು, ಸುಮಲತಾ ಅಂಬರೀಶ್ ಅವರ ಬಗ್ಗೆ ಸಾರಿಗೆ ಸಚಿವ ಡಿಸಿ ತಮ್ಮಣ್ಣ ನೀಡಿದ್ದ ಹೇಳಿಕೆಗೆ ಅಂಬರೀಶ್ ಅವರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಬರೀಶ್ ಅವರ ಹತ್ತಿರದ ಸಂಬಂಧಿಯಾಗಿರುವ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಸುಮಲತಾ ಅಂಬರೀಶ್ ಅವರ ಸ್ಪರ್ಧೆ ಕುರಿತಂತೆ ಆಡಿದ ಮಾತು ಈಗ ಅಂಬರೀಶ್ ಕುಟುಂಬಸ್ಥರು ಗರಂ ಆಗುವಂತೆ ಮಾಡಿದೆ. ಅಂಬರೀಶ್ ಅವರ  ಅಣ್ಣನ ಪುತ್ರ ಅಮರ್, ಪತ್ನಿ ವಸಂತಾ, ಸುಮಲತಾ ಅವರು ತಮ್ಮಣ್ಣ ಅವರಿಗೆ ಪುತ್ರಿ ಸಮಾನರಾಗಿದ್ದು, ಈ ರೀತಿ ಮಾತನಾಡಬಾರದಿತ್ತು. ವಯಸ್ಸಾಗಿದೆ ತಾಳ್ಮೆಯಿಂದ ಮಾತನಾಡಿ ಎಂದು ಸಲಹೆ ನೀಡಿದ್ದಾರೆ.

ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ ಕುರಿತು ಮಾತನಾಡಿರುವ ಅವರು, ಚುನಾವಣೆಯಲ್ಲಿ ಗೆಲ್ಲುವುದು ಸೋಲುವುದು ಮುಖ್ಯವಲ್ಲ. ನೀವು ಇಷ್ಟೊಂದು ಕೀಳಾಗಿ ಮಾತನಾಡುತ್ತೀರಾ ಅಂದು ಕೊಂಡಿರಲಿಲ್ಲ. ನಾವು ನಿಮಗೆ ಬೆಂಬಲಿಸಿದ್ದು ಕುಟುಂಬಸ್ಥರು ಎಂದು. ಸುಮಲತಾ ಅವರಿಗೆ ಜನ ಬೆಂಬಲವಿದೆ. ನೇರವಾಗಿ ಎದುರಿಸಿ ಎಂದು ಸವಾಲು ಹಾಕಿದರು.

ಹಾಗೆಯೇ ಎಷ್ಟು ಸಚಿವರ ಮನೆಯಲ್ಲಿ ಪತ್ನಿಯರು ನೀರು ಊಟ ಕೊಡ್ತಾರೆ. ಸಂಬಂಧ ಬೇರೆ. ಪಕ್ಷ ಬೇರೆ ಎಂದು ಕಿಡಿಕಾರಿದ ಅಮರ್ ಹಾಗೂ ಪತ್ನಿ ವಸಂತ ಅವರು ಬಣ್ಣದ ಲೋಕದ ಬಗ್ಗೆ ಮಾತನಾಡಬೇಡಿ. ಹೆಚ್.ಡಿ ಕುಮಾರಸ್ವಾಮಿ, ಮತ್ತು ನಿಖಿಲ್ ಸಿನಿಮಾ ರಂಗದಿಂದಲೇ ಬಂದವರು ಎಂದು ಟಾಂಗ್ ಕೊಟ್ಟರು. (ಕೆ.ಎಸ್, ಎಂ.ಎನ್)

Leave a Reply

comments

Related Articles

error: