ಕರ್ನಾಟಕ

ಮಾಧ್ಯಮದವರ ಮೇಲೆ ಗೂಂಡಾಗಿರಿ ಮಾಡಿದ ಯುವ ಕಾಂಗ್ರೆಸ್ ನ ರಾಘವ ಪೂಜಾರಿ

ಧಾರವಾಡ,ಮಾ.8-ವಿದ್ಯಾನಗರಿ ಧಾರವಾಡದಲ್ಲಿ ಕಳೆದ ಹಲವು ವರ್ಷಗಳಿಂದ ಯುವ ಕಾಂಗ್ರೆಸ್ ಹೆಸರಿನಲ್ಲಿ ಗೂಂಡಾಗಿರಿ ಮಾಡಿಕೊಂಡು ಓಡಾಡಿಕೊಂಡಿದ್ದ ರಾಘವ ಪೂಜಾರಿ ಅಲಿಯಾಸ್ ರಾಘು ಮಾಧ್ಯಮದವರ ಮೇಲೆಯೇ ಗೂಂಡಾಗಿರಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಉತ್ತರ ಕರ್ನಾಟಕ ಸೈನಿಕ ಕಲ್ಯಾಣ ಸಮಿತಿ ವತಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಳಿಯ ಕಾರ್ಗಿಲ್ ಸ್ಥೂಪದ ಬಳಿ ಮಂಡ್ಯದ ಯೋಧ ಹೆಚ್.ಗುರು ಪತ್ನಿ ಕಲಾವತಿ ಹಾಗೂ ತಾಯಿ ಸನ್ಮಾನ ಸಮಾರಂಭದ ವೇಳೆ ಸಂದರ್ಶನ ನಡೆಸುವ ಸಂದರ್ಭದಲ್ಲಿ ಟಿವಿ ಪ್ರತಿನಿಧಿಗಳಿಗೆ ಮನಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಗೂಂಡಾ ವರ್ತನೆ ತೋರಿದ್ದಾನೆ ಎಂದು ಹಲ್ಲೆಗೊಳಗಾದ ಮಾಧ್ಯಮ ಪ್ರತನಿಧಿಗಳು ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

ರಾಘವ ಪೂಜಾರಿ ಸುಖಾಸುಮ್ಮನೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ತಂಟೆ ತಗೆದು ನಿಮ್ಮನ್ನು ನೋಡಿಕೊಳ್ಳುತ್ತೇನೆ. ಅಡ್ಡಡ್ಡ ಹೊರುತ್ತೇನೆ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೂಗುತ್ತಾ ಚೀರುತ್ತಾ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ಹಲ್ಲೆ ಮಾಡಲು ಯತ್ನಿಸಿರುತ್ತಾನೆ. ಪೊಲೀಸರ ಸಮ್ಮುಖದಲ್ಲಿಯೇ ಈ ಗೂಂಡಾವರ್ತನೆ ತೋರಿಸಿದ್ದಾನೆ. ಅವರು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರೂ ರೋಷಾವೇಶ ಕಿಂಚಿತ್ತೂ ಕಡಿಮೆ ಮಾಡದೆ ದರ್ಪ ತೋರಿಸಿದ್ದಾನೆ. ರಾಘು ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಸೂಕ್ತ ರಕ್ಷಣೆ, ಭದ್ರತೆ ನೀಡಬೇಕು ಎಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್.‌ ನಾಗರಾಜ  ಅವರಲ್ಲಿ ಮನವಿ ಮಾಡಿದ್ದಾರೆ. (ಕೆ.ಎಸ್, ಎಂ.ಎನ್)

Leave a Reply

comments

Related Articles

error: