ಮೈಸೂರು

ರಂಗಭೂಮಿಗೆ ಒತ್ತು ನೀಡಿದರೆ ನಾಟಕಗಳು ಪರಿಣಾಮ ಬೀರಲಿದೆ : ಸಚಿವೆ ಉಮಾಶ್ರೀ

ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿಗೆ ಹೆಚ್ಚಿನ ಒತ್ತು ನೀಡಿದರೆ ಮಾತ್ರ ನಾಟಕಗಳು ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದರು

ಮೈಸೂರಿನ ಕಲಾಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ನಡೆದ 2015 ಹಾಗೂ 2016ನೇ ಸಾಲಿನ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾಜದಲ್ಲಿ ಸಾಮಾಜಿಕ ಬದಲಾವಣೆಗಳನ್ನು ತರುವ ಶಕ್ತಿ ನಾಟಕಕ್ಕಿದ್ದು, ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ ಎಂದರು.

ಸರ್ಕಾರ ನಾಟಕ ಕಲೆಗಳನ್ನು ಉಳಿಸಿ, ಬೆಳೆಸುವ ಕೆಲಸವನ್ನು ನಿರಂತರವಾಗಿ ಮಾಡಲಿದೆ. ಹಿರಿಯ ರಂಗಕಲಾವಿದರು ಕಿರಿಯ ರಂಗಕರ್ಮಿಗಳಿಗೆ ಮಾರ್ಗದರ್ಶನ ನೀಡಬೇಕು. ರಂಗಕಲೆಯ ಕ್ರಿಯಾಶೀಲತೆಯನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.

ಅಕಾಡೆಮಿಯ ವತಿಯಿಂದ ಗೌರವ ಪ್ರಶಸ್ತಿಗೆ ಪಾತ್ರರಾದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ ಕಲೆಯೊಂದಿಗೆ ಸಂಸ್ಕೃತಿಯನ್ನು ಬೆಳೆಸಬೇಕು. ಹಾಗಿದ್ದಾಗ ಮಾತ್ರ ಸಂಸ್ಕೃತಿ ಉಳಿಸಲು ಸಾಧ್ಯ ಎಂದರು.

ಮನುಬಾಯಿ ನಾಕೋಡ,  ಮಧುಕೇಶ ಚಿಂದೋಡಿ, ಗೂಡುಸಾಹೇಬ ಚಟ್ನಿಹಾಳ, ಮಮತಾ ಗುಡೂರು, ದೇವಿರಪ್ಪ ಶಿವಪ್ಪ ಬಣಕಾರ, ವೆಂಕಟೇಶ್ ಕುಲಕರ್ಣಿ, ಕೆ.ವಿ.ಕೃಷ್ಣಯ್ಯ, ಪೂಜಾರ ಚಂದ್ರಪ್ಪ, ರಾಮಚಂದ್ರರಾವ್ ಟಿ.ಆರ್, ವೆಂಕಟೇಶ್ ಕೆ.ವಿ, ಸೂರಯ್ಯ ಎಸ್.ಕೆ, ಸರೋಜಿನಿ, ವಿಠಲ ಕೊಪ್ಪದ, ಕಿಶೋರ್ ಡಿ.ಶೆಟ್ಟಿ, ಚಂದ್ರು ಉಡುಪಿ, ಮಾನಮ್ಮ ರಾಯನ ಗೌಡ, ವನಜಶ್ರೀ ಶೆಟ್ಟಿ, ತಿಪ್ಪೇಸ್ವಾಮಿ ಬಿ.ಇ, ಪರಶುರಾಮ ಪ್ರಿಯ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ವಾಸು, ನಾಟಕ ಅಕಾಡೆಮಿಯ ಅಧ್ಯಕ್ಷ ಎಲ್.ಬಿ.ಶೇಖ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

comments

Related Articles

error: