ಮೈಸೂರು

ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಹಿಳಾ ದಿನಾಚರಣೆ

ಮೈಸೂರು,ಮಾ.8-ನಗರದ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಇನ್ ಸ್ಪೆಕ್ಟರ್ ಬಿ.ಜಿ.ಪ್ರಕಾಶ್ ಠಾಣೆಯಲ್ಲಿನ ಮಹಿಳಾ ಸಿಬ್ಬಂದಿಗಳಿಗೆ ಹೂಗುಚ್ಚ ನೀಡಿ ಮಹಿಳಾ ದಿನಾಚರಣೆಗೆ ಶುಭಾಶಯ ಕೋರಿದರು. ಬಳಿಕ ಮಹಿಳಾ ಸಿಬ್ಬಂದಿಗಳಿಗೆ ಕೇಕ್ ಕತ್ತರಿಸಿ ಮಹಿಳಾ ದಿನಾಚರಣೆಯನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿಗಳಾದ ನಂದಿನಿ, ಶೃತಿ, ಹೇಮಾವತಿ, ಸಬ್ ಇನ್ ಸ್ಪೆಕ್ಟರ್ ಲೋಲಾಕ್ಷ ಹಾಜರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: