ಪ್ರಮುಖ ಸುದ್ದಿಮೈಸೂರು

ದಿ.10ರಂದು ವೀಲ್ ಚೇರ್ ಬ್ಯಾಸ್ಕೆಟ್ ಬಾಲ್

120 ವಿಶೇಷ ಚೇತನ ಕ್ರೀಡಾಪಟುಗಳು ಭಾಗಿ

ಮೈಸೂರು,ಮಾ.8 : ಕರ್ನಾಟಕ ವೀಲ್ ಚೇರ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ ಸಹಕಾರದೊಂದಿಗೆ ಜೆಎಸ್ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ವತಿಯಿಂದ ರಾಜ್ಯಮಟ್ಟದ ವೀಲ್ ಚೇರ್ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾದ ಬಿ.ಇಳಂಗೋವನ್ ತಿಳಿಸಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇಂದು, ಮಾ.10ರ, ಬೆಳಗ್ಗೆ 9.30ರಿಂದ ಎಸ್.ಜೆಸಿ.ಇ ಕ್ರೀಡಾ ಸಂಕೀರ್ಣದಲ್ಲಿ ಆರಂಭವಾಗಲಿರುವ ಪಂದ್ಯಾವಳಿಯನ್ನು ಅಂತರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟು ಹೆಚ್.ಎಂ.ಬಾಂಧವ್ಯ ಉದ್ಘಾಟಿಸುವರು. ಜೆಎಸ್ಎಸ್ ವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ರಂಗನಾಥಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಉದ್ಯಮಿ ಕೆ.ಅಶೋಕ್ ಕುಮಾರ್, ಕರ್ನಾಟಕ ವೀಲ್ ಚೇರ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಅಧ್ಯಕ್ಷ ರಾಯ್ ಸೈಮನ್ ಮುಖ್ಯ ಅತಿಥಿಗಳಾಗಿದ್ದಾರೆ ಎಂದು ತಿಳಿಸಿದರು.

ಸಂಜೆ 6 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸದ ಪ್ರತಾಪ್ ಸಿಂಹ ಪ್ರಶಸ್ತಿ ವಿತರಿಸುವರು. ಬ್ಯಾಸ್ಕೆಟ್ ಬಾಲ್ ತರಬೇತಿದಾರ ಬಿ.ಎಸ್.ಗಿರೀಶ್, ಜೆಸ್ಎಸ್ ವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಬಿ.ಆರ್.ಉಮಾಕಾಂತ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ರಾಜ್ಯದ ಬೆಳಗಾವಿ, ದಾವಣಗೆರೆ, ಬಳ್ಳಾರಿ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳು ವಿಶೇಷ ಚೇತನರ 19 ಬಾಲಕರ ಹಾಗೂ 8 ಬಾಲಕಿಯರ ತಂಡಗಳ 120 ಭಾಗಿಯಾಗುತ್ತಿದ್ದು, ಪ್ರತಿ ತಂಡದಲ್ಲಿ ಮೂವರು ಕ್ರೀಡಾಪಟುಗಳಿರುವರು, ವಿಜೇತ ತಂಡಕ್ಕೆ ಟ್ರೋಫಿ, ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಕಾಲೇಜಿನ ಪಿ.ಜಗದೀಶ್, ಶಿವಕುಮಾರ್, ವಿಶೇಷ ಚೇತನ ಕ್ರೀಡಾಪಟುಗಳಾದ ಎಸ್.ಸುನೀತಾ ಹಾಗೂ ದಾನಮ್ಮ ಪಾಟೀಲ್ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: