ಪ್ರಮುಖ ಸುದ್ದಿಮೈಸೂರು

ಮಾ.10ರಂದು ಒಡನಾಡಿಯಿಂದ ಅಂತರಾಷ್ಟ್ರೀಯ ಯೋಗ : 42 ದೇಶಗಳಲ್ಲಿ ಏಕ ಕಾಲದಲ್ಲಿ ಪ್ರದರ್ಶನ

ಮೈಸೂರು,ಮಾ.8 : ಮಾನವ ಸಾಗಾಣಿಕೆ, ಲೈಂಗಿಕ ದೌರ್ಜನ್ಯ ಹಾಗೂ ಸಾಮಾಜಿಕ ಸಮಸ್ಯೆಗಳಿಂದ ಶೋಷಿತ ಮಹಿಳೆಯರ ಸಶಕ್ತತೆಗಾಗಿ ಶ್ರಮಿಸುವ ಒಡನಾಡಿ ಸೇವಾ ಸಂಸ್ಥೆಯಿಂದ ಇದೇ ದಿ.10ರಂದು 10ನೇ ಅಂತರಾಷ್ಟ್ರೀಯ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕೆ.ವಿ.ಸ್ಟ್ಯಾನ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 8 ಗಂಟೆಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಇಂಗ್ಲೆಡ್, ಅಮೆರಿಕಾ, ಆಸ್ಟ್ರೇಲಿಯಾ, ಹಾಲೆಂಡ್, ಮೆಕ್ಸಿಕೋ, ಸ್ವೀಡನ್, ಫ್ರಾನ್ಸ್, ಅರ್ಜೆಂಟೈನಾ, ಇನ್ಟೋನಿಯಾ, ಕೆನಡಾ ಸೇರಿದಂತೆ ಸುಮಾರು 42 ದೇಶಗಳ ಪ್ರತಿನಿಧಿಗಳು ಸೇರಿದಂತೆ ಸುಮಾರು ಮೂರ ರಿಂದ ಐದು ನೂರು ಜನರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಜಿ.ಅಭಿರಾಂ ಶಂಕರ್, ಮಾಜಿ ಶಾಸಕ ವಾಸು, ರಾಜವಂಶಸ್ಥರಾದ ಪ್ರಮೋದದೇವಿ ಒಡೆಯರ್, ಯುದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಹಿಲ್ ವ್ಯೂವ್ ಅಕಾಡೆಮಿ ಮುಖ್ಯಸ್ಥ ಹೆಚ್.ವಿ.ರಾಜೀವ್, ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಯೋಗಾಚಾರ್ಯ ಡಾ.ಬಿ.ಸಿ.ಮೂರ್ತಿ ಪಾಲ್ಗೊಳ್ಳಲಿದ್ದಾರೆ.

ಇದೇ ಮೊದಲ ಬಾರಿಗೆ ದುಬೈನಲ್ಲಿಯೂ ಸೇರಿದಂತೆ ವಿಶ್ವದ 42 ದೇಶಗಳ ಸುಮಾರು 152 ಕೇಂದ್ರಗಳಲ್ಲಿ ಏಕ ಕಾಲದಲ್ಲಿ ಪ್ರದರ್ಶಿತಗೊಳ್ಳುತ್ತಿರುವ ಈ ಯೋಗ ಕಾರ್ಯಕ್ರಮದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಯೋಗಪಟುಗಳು ಭಾಗಿಯಾಗಲಿದ್ದಾರೆ. ಅಲ್ಲದೇ ಇದೊಂದು ಚಾರಿಟಿಗೆಂದು ನಡೆಸಲ್ಪಡುವ ಪ್ರದರ್ಶನವಾಗಿದ್ದು ಈ ವೇಳೆ ಸಂಸ್ಥೆ ಮಾರಾಟ ಮಾಡುವ ಟೀ ಶರ್ಟ್ ಅನ್ನು ಖರೀದಿಸುವ ಮೂಲಕ ಶೋಷಿತ ಮಹಿಳೆಯರ ಸಬಲೀಕರಣಕ್ಕೆ ಕೈಜೋಡಿಸಬೇಕೆಂದು ಕೋರಿದರು.

ಒಡನಾಡಿಯ ಪರಶು, ಇಂಗ್ಲೆಂಡಿನ ರೂಭಿ, ಯೋಗತರಬೇತುದಾರ ಬಿ.ಪಿ.ಮೂರ್ತಿ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: