ಮೈಸೂರು

ಮೈಸೂರು ನಗರದ 464 ಪೊಲೀಸರಿಗೆ ಪದೋನ್ನತಿ

ಮೈಸೂರಿನ ಪೊಲೀಸ್ ಭವನದಲ್ಲಿ ಮೈಸೂರು ನಗರದ ಸಿವಿಲ್, ಸಶಸ್ತ್ರ ಮೀಸಲು ಪಡೆ ಮತ್ತು ಮೌಂಟೆಡ್ ಪೊಲೀಸರಿಗೆ ಪದೋನ್ನತಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಸಮಾರಂಭದಲ್ಲಿ ಪೇದೆಯಿಂದ ಮುಖ್ಯಪೇದೆಗೆ 168 ಮಂದಿಯನ್ನು ಹಾಗೂ ಮುಖ್ಯಪೇದೆಯಿಂದ ಸಹಾಯಕ  ಉಪನಿರೀಕ್ಷಕರ ಹುದ್ದೆಗೆ 73ಮಂದಿಯನ್ನು, ಎಹೆಚ್ ಸಿಯಿಂದ ಎಆರ್ ಎಸ್ಐ ಗೆ56 ಮಂದಿಯನ್ನು, ಎಪಿಸಿಯಿಂದ ಎಹೆಚ್ ಸಿಗೆ 137ಮಂದಿಯನ್ನು,  ಎಹೆಚ್ ಸಿ ಯಿಂದ ಎಆರ್ ಎಸ್ ಐಗೆ 6ಮಂದಿಯನ್ನು, ಎಪಿಸಿಯಿಂದ ಎಹೆಚ್ ಸಿ ಗೆ 24ಮಂದಿಯನ್ನು ಅವರ ಕುಟುಂಬದವರ ಸಮಕ್ಷಮ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಪದೋನ್ನತಿ ಪ್ರದಾನ ಮಾಡಿದರು.

ಈ ಸಂದರ್ಭ ಡಿಸಿಪಿಗಳಾದ ಡಾ.ಶೇಖರ್, ಹೆಚ್.ಟಿ.ಎನ್.ರುದ್ರಮುನಿ, ಬಿ.ವಿ.ಕಿತ್ತೂರ್, ಮೌಂಟೆಡ್ ಕಮಾಂಡೆಂಟ್ ಸಿದ್ಧರಾಜು, ಮೈಸೂರು ನಗರದ ಎಲ್ಲ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: