ಸುದ್ದಿ ಸಂಕ್ಷಿಪ್ತ

ವಿದುಷಿ ಸಿಂಚನ ಭರತನಾಟ್ಯ ರಂಗಪ್ರವೇಶ ನಾಳೆ

ಮೈಸೂರು,ಮಾ.8 : ವಸುಂಧರ ಪ್ರದರ್ಶಕ ಕಲೆಗಳ ಕೇಂದ್ರದ ವತಿಯಿಂದ ವಿದುಷಿ ಸಿಂಚನ ಅವರ ಭರತನಾಟ್ಯ ರಂಗಪ್ರವೇಶವನ್ನು ಮಾ.9ರಂದು ಸಂಜೆ 5.30ಕ್ಕೆ ಗಂಟೆಗೆ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಸಾನಿಧ್ಯದಲ್ಲಿ, ಕೇಂದ್ರದ ಅಧ್ಯಕ್ಷ ಕೆ.ವಿ.ಮೂರ್ತಿ ಅಧ್ಯಕ್ಷತೆ ವಹಿಸುವರು, ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ವಿಶ್ರಾಂತ ಕುಲಪತಿ ಡಾ.ಸರ್ವಮಂಗಳ ಶಂಕರ್ ಉದ್ಘಾಟಿಸುವರು. ಕವಿ ಕೆ.ಸಿ.ಶಿವಪ್ಪ, ಕರ್ನಾಟಕ ಲೋಕಸೇವ ಯೋಗ ಪ್ರಭಾರ ಅಧ್ಯಕ್ಷ ಎಸ್.ಪಿ.ಷಡಕ್ಷರಸ್ವಾಮಿ, ನಿವೃತ್ತ ಡಿಜಿಪಿ ಎಲ್.ರೇವಣ್ಣಸಿದ್ದಯ್ಯ ಇರಲಿದ್ದು, ಗುರು ಡಾ.ವಸುಂಧರ ದೊರೆಸ್ವಾಮಿಯವರ ಗುರುವಂದನೆ ನಡೆಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: