ಮೈಸೂರು

ಆಸ್ಟ್ರೇಲಿಯಾದ ಮೇಲ್ಬರ್ನ್‍ನಲ್ಲಿ ಅಪಘಾತ : ಮೈಸೂರಿನ ಮೂಲದ ನೇತ್ರಾ ಸ್ಥಿತಿ ಗಂಭೀರ

ಆಸ್ಟ್ರೇಲಿಯಾದ ಮೆಲ್ಬರ್ನ್‍ನ ಸಾಫ್ಟ್ ವೇರ್ ಉದ್ಯೋಗಿ ಮೈಸೂರಿನ ಮೂಲದ ನೇತ್ರಾ ಕೃಷ್ಣಮೂರ್ತಿ ಈಚೆಗೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಸ್ವರೂಪ ಗಾಯಗೊಂಡಿದ್ದು ಕೋಮಾ ಸ್ಥಿತಿಯಲ್ಲಿದ್ದಾರೆ.

ಕಳೆದ ಶುಕ್ರವಾರ ಮೆಲ್ಬರ್ನ್‍ನಲ್ಲಿ ವ್ಯಕ್ತಿಯೊರ್ವ ನಿರ್ಲಕ್ಷ್ಯಯಿಂದ ವಾಹನ ಚಾಲಾಯಿಸಿದ್ದರ ಪರಿಣಾಮ ವಾಹನವು ಪಾದಚಾರಿಗಳ ಮೇಲೆ ಮೇಲೇರಗಿತ್ತು ಈ ಅಪಘಾತದಲ್ಲಿ ನೇತ್ರಾ ಅವರ ತಲೆಗೆ, ದೇಹದ ಇತರೆ ಭಾಗಗಳಾದ ಶ್ವಾಸಕೋಶ, ಮೂತ್ರಕೋಶ, ಪಕ್ಕೆಲುಬು ಹಾಗೂ ಇತರೆ ಭಾಗಗಳಿಗೆ ತೀವ್ರ ಗಂಭೀರ ಗಾಯಗಳಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಇದೇ ಅಪಘಾತದಲ್ಲಿ ಐವರು ದುರ್ಮರಣಕ್ಕೀಡಾಗಿದ್ದಾರೆ.

ನೇತ್ರಾ ಎಂಟು ತಿಂಗಳಿನಿಂದಷ್ಟೇ ತಾಯಿಯಾಗಿದ್ದಾರೆ. ಅವರು ಕಳೆದ ವಾರವಷ್ಟೇ ಹೆರಿಗೆ ರಜೆ ಮುಗಿಸಿ ಉದ್ಯೋಗಕ್ಕೆ ಮರಳಿದ್ದಾರೆ. ಶುಕ್ರವಾರ ಮಧ್ಯಾಹ್ನ ತನ್ನ ಪುಟ್ಟ ಕಂದನಿಗೆ ಹಾಲುಣ್ಣಿಸಿ ಕಚೇರಿಗೆ ತೆರಳುವ ಸಂದರ್ಭದಲ್ಲಿ ಈ ರಸ್ತೆ ಅಪಘಾತ ಸಂಭವಿಸಿದ್ದು, ಸದ್ಯ ತೀವ್ರಾ ನಿಗಾ ಘಟಕದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Leave a Reply

comments

Related Articles

error: