ಮೈಸೂರು

ಬಿಜೆಪಿ ಮಹಿಳಾ ಮೋರ್ಚಾದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಮೈಸೂರು,ಮಾ.9-ಕೃಷ್ಣರಾಜ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ನಗರದ ನಾದಬ್ರಹ್ಮ ಎದುರಿರುವ ಫೈಲೆಟ್ ವೃತ್ತದ ಬಳಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಶಾಸಕ ಎಸ್.ಎ.ರಾಮದಾಸ್ ಅವರ ನೇತೃತ್ವದಲ್ಲಿ ನಗರಪಾಲಿಕೆಯ ಸದಸ್ಯರುಗಳು, ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ತಾಯಿ ಭಾರತಾಂಬೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಬೇಸಿಗೆಯ ನಿಮಿತ್ತ ನಂಜುಮಳಿಗೆ ಬಳಿ ವ್ಯಾಪಾರ ಮಾಡುವ ಸುಮಾರು 50 ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿಗಳನ್ನು ಶಾಸಕ ರಾಮದಾಸ್ ಹಾಗೂ ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ವಿತರಿಸಿದರು.

ಅಸಂಘಟಿತ ಕೆಲಸಗಾರರಿಗೆಂದು ಪ್ರಧಾನಮಂತ್ರಿ ನೀಡಿರುವ ಯೋಜನೆ ಪ್ರಧಾನಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆಗೆ ಚಾಲನೆ ನೀಡಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಲು ಅಗತ್ಯವಾಗಿ ಬೇಕಾಗಿರುವ ದಾಖಲೆಗಳು ಹಾಗೂ ಸಂಬಂಧಿತ ಮಾಹಿತಿಯನ್ನು ಬೀದಿ ಬದಿ ವ್ಯಾಪಾರಿಗಳಿಗೆ ತಿಳಿಸಿಕೊಡಲಾಯಿತು.

ಬಿಜೆಪಿ ಪಕ್ಷದಿಂದ ದೇಶದಾದ್ಯಂತ ನಡೆಸಲಾಗುತ್ತಿರುವ ಕಮಲ ಜ್ಯೋತಿ ಕಾರ್ಯಕ್ರಮವನ್ನು ಬಿಜೆಪಿ ಪಕ್ಷದ ಚಿಹ್ನೆಯಾದ ಕಮಲದ ಗುರುತಿನ ಚಿತ್ರದ ಸುತ್ತಲು ಕಮಲ ಜ್ಯೋತಿಯನ್ನು ಬೆಳಗುವುದರ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲೆಂದು ಮತ್ತೊಂದು ಬಾರಿಗೆ ಮೋದಿ ಮೋದಿ ಎಂಬ ಜಯಘೋಷ ಕೂಗಲಾಯಿತು.

ಮುಖಂಡರಾದ ಮೈ.ವಿ.ರವಿಶಂಕರ್, ಗಿರೀಶ್, ಅನ್ನಪೂರ್ಣ, ವಿಜಯ, ರೇಖಾ, ಕೃಷ್ಣರಾಜ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ವಿದ್ಯಾ ಅರಸ್, ಮಹಿಳಾ ಮೋರ್ಚಾ ಅಧ್ಯಕ್ಷೆ ನೂರ್ ಫಾತಿಮಾ, ಮೋರ್ಚಾದ ಪದಾಧಿಕಾರಿಗಳು ಹಾಗೂ ನಗರಪಾಲಿಕೆ ಸದಸ್ಯರುಗಳಾದ ಸೌಮ್ಯ ಉಮೇಶ್, ಛಾಯಾದೇವಿ, ರೂಪ, ಸುನಂದ ಪಾಲನೇತ್ರ, ಶಾಂತಮ್ಮ ವಡಿವೇಲ್, ಶಾರದಮ್ಮ ಈಶ್ವರ್, ಚಂಪಕ, ಗೀತಾಶ್ರೀ ಯೋಗಾನಂದ, ಮಾಜಿ ಉಪ ಮಹಾಪೌರರಾದ ವನಿತಾ ಪ್ರಸನ್ನ, ನಗರಪಾಲಿಕೆ ಮಾಜಿ ಸದಸ್ಯರುಗಳಾದ ಜಗದೀಶ್, ಸೀಮಾ ಪ್ರಸಾದ್ ಉಪಸ್ಥಿತರಿದ್ದರು. (ಕೆ.ಎಸ್, ಎಂ.ಎನ್)

 

Leave a Reply

comments

Related Articles

error: