ಸುದ್ದಿ ಸಂಕ್ಷಿಪ್ತ

ಮಣ್ಣು ಪರೀಕ್ಷಾ ಕಾರ್ಡ್ ವಿತರಣೆ .11.

ಮೈಸೂರು,ಮಾ.9 : ರೈತಮಿತ್ರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ, ಹಣ್ಣು ಮತ್ತು ತರಕಾರಿ ಬೆಳೆಗಾರರ ಸಂಘದ ವತಿಯಿಂದ ತರಕಾರಿ ಬೆಳೆಗಾರ ರೈತರ ಸಂವಾದ ಮತ್ತು ಮಣ್ಣು ಪರೀಕ್ಷಾ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಜೆ.ಎಸ್ಎಸ್ ಆಸ್ಪತ್ರೆಯ ರಾಜೇಂದ್ರ ಭವನದಲ್ಲಿ ಏರ್ಪಡಿಸಲಾಗಿದೆ.

ಮಾ.11ರ ಬೆಳಗ್ಗೆ 11 ಗಂಟೆಗೆ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಣ್ಣು ವಿಜ್ಞಾನಿ ಜೆ.ಜಿ.ರಾಜಣ್ಣ ಮಣ್ಣು ಪರೀಕ್ಷಾಕಾರ್ಡ್ ವಿತರಿಸುವರು. ತೋಟಗಾರಿಕಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಬಿ.ಎಸ್.ಹರೀಶ್ ತರಕಾರಿ ಬೆಳೆಗಳ ಬಗ್ಗೆ ರೈತರ ಜೊತೆ ಸಂವಾದ ಮಾಡುವರು. ಪ್ರಗತಿಪರ ನೈಸರ್ಗಿಕ ಕೃಷಿಕರ ಸಂವಾದದಲ್ಲಿ ನಾಗಮಂಗಲದ ರೈತ ಸಾತೇನಹಳ್ಳಿ ಕುಮಾರಸ್ವಾಮಿ, ಕೆ.ಎನ್.ನೀಲಕಂಠ ಭಾಗವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: