ದೇಶ

ಪಂಚರಾಜ್ಯಗಳ ಚುನಾವಣೆ : ಬಹಿರಂಗ ಹೇಳಿಕೆ ನೀಡದಂತೆ ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್‍ ಷಾ ಎಚ್ಚರಿಕೆ

ಪಂಚರಾಜ್ಯಗಳ ಚುನಾವಣೆವರೆಗೂ ಬಿಜೆಪಿ ರಾಜ್ಯ ನಾಯಕರು ಮಾಧ್ಯಮಗಳಲ್ಲಿ ಬಹಿರಂಗ ಹೇಳಿಕೆಗಳನ್ನು ನೀಡಬಾರದೆಂದು ರಾಷ್ಟ್ರಾಧ್ಯಕ್ಷ ಅಮಿತ್‍ ಶಾ ಕಟ್ಟಾಜ್ಞೆ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ‍್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪನವರ ಮಧ್ಯೆ ಬಿರುಕು ದಿನದಿಂದ ದಿನಕ್ಕೆ ಬಗೆಹರಿಯದ ಕಗ್ಗಟ್ಟಾಗುತ್ತಿದ್ದು ಇದಕ್ಕೆ ಪಕ್ಷದ ಹೈಕಮಾಂಡ್‍ ಅಮಿತ್‍ಶಾ ಬಿಕ್ಕಟ್ಟು ಧಮನಿಸಲು ಸಮಯವಿಲ್ಲದೇ ಇರುವುದರಿಂದ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಪಂಚರಾಜ್ಯಗಳ ಚನಾವಣಾ ವೇಳಾ ಪಟ್ಟಿಯನ್ನು ಆಯೋಗವು ಬಿಡುಗಡೆಗೊಳಿಸಿದ್ದು ಚುನಾವಣೆ ಮುಗಿಯುವವರೆಗೂ ರಾಜ್ಯ ನಾಯಕರು ಎರಡು ಬಣಗಳ ಯಾವೊಬ್ಬ ಮುಖಂಡರು ಮಾಧ್ಯಮದ ಮುಂದೆ ಬಹಿರಂಗ ಹೇಳಿಕೆಗಳನ್ನು ನೀಡಿದರೆ ದಂಡ ತೆರಬೇಕಾಗುವುದು ಎಂದು ಎಚ್ಚರಿಸಿದ್ದಾರೆ.

ರಾಜ್ಯ ನಾಯಕ ವಾಕ್ ಸಮರವನ್ನು ರಾಜ್ಯ ಉಸ್ತುವಾರಿ ಟಿ.ಮುರಳೀಧರ್‍ ರಾವ್ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ ಷಾಗೆ ದೂರು ನೀಡಿದ್ದು ಚುನಾವಣೆಗಳು ಮುಗಿದ ಬಳಿಕ ಸಮಸ್ಯೆಯನ್ನು ಪರಿಹರಿಸಲಾಗುವುದು ಎನ್ನುವ ಆಶ್ವಾಸನೆಯನ್ನು ಅವರು ನೀಡಿದ್ದು ಸಂಗೊಳ್ಳಿರಾಯಣ್ಣ ಬ್ರಿಗೇಡ್ ಚಟುವಟಿಕೆಗಳು ಪಕ್ಷದ ಚೌಕಟ್ಟಿನಲ್ಲಿಯಿರಬೇಕೆಂದು ಸೂಚಿಸಿದ್ದಾರೆ ಎನ್ನಲಾಗಿದೆ.

ಪಕ್ಷದ ಪ್ರಮುಖ ನಾಯಕರ ಆರೋಪ-ಪ್ರತ್ಯಾರೋಪಗಳು ತಾರಕ್ಕೇರಿದ್ದು ಇದರಿಂದ ರಾಜ್ಯದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಕಾರ್ಯಕರ್ತರು ಬಣಗಳಾಗಿ ಮಾರ್ಪಟ್ಟು ಹಾದಿಬೀದಿಗಳಲ್ಲಿ ಕಚ್ಚಾಡುವುದು ಸಹಿಸಲಾಸಾಧ್ಯವಾದ ವಿಷಯವೆಂದು ನಾಯಕರಿಗೆ ಮನವರಿಕೆ ಮಾಡಲಾಗಿದೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳುವವರೆಗೂ ಯಾವೊಬ್ಬ ನಾಯಕರು ಬಹಿರಂಗ ಹೇಳಿಕೆ ನೀಡುವಂತಿಲ್ಲವೆಂದು ನಾಯಕರಿಗೆ ಕಟ್ಟೆಚ್ಚರ ನೀಡಿ ಎಂದು ರಾಜ್ಯ ಉಸ್ತುವಾರಿ ಮುರಳೀಧರ್‍ ಗೆ ರಾಷ್ಟ್ರಾಧ್ಯಕ್ಷ ಅಮಿತ್‍ ಷಾ ಸೂಚಿಸಿದ್ದಾರೆ ಎನ್ನಲಾಗಿದೆ.

 

Leave a Reply

comments

Related Articles

error: