ಮೈಸೂರು

ಜಿಲ್ಲಾಧಿಕಾರಿಗಳ ಮನೆಯಲ್ಲಿ ಬಾತುಕೋಳಿಗಳು ಸಾವು

ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಅವರ ಮನೆಯಲ್ಲಿ ಎರಡು ಬಾತುಕೋಳಿಗಳ ಸಾವನ್ನಪ್ಪಿವೆ.
ಸೋಮವಾರ ಮಧ್ಯಾಹ್ನ ಎರಡು ಬಾತುಕೋಳಿಗಳು ಸಾವನ್ನಪ್ಪಿದ್ದು, ಸ್ಥಳಕ್ಕೆ ಪಶುವೈದ್ಯಾಧಿಕಾರಿಗಳು ಭೇಟಿ ನೀಡಿ  ಪರಿಶೀಲನೆ ನಡೆಸಿದ್ದರು ಎನ್ನಲಾಗಿದೆ.
ಫುಡ್‌ಪಾಯಿಸನ್ ಅಥವಾ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿರುವ ಕುರಿತು ಅನುಮಾನಗಳು ವ್ಯಕ್ತವಾಗುತ್ತಿವೆಯಾದರೂ,  ಹಲವೆಡೆ ಹಕ್ಕಿ ಜ್ವರದ ಆತಂಕಗಳಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಕ್ತ ಹಾಗೂ ಹಿಕ್ಕೆಯ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.
ಬಾತುಕೋಳಿಗಳಿಗೆ ಒಂಭತ್ತು ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ.

Leave a Reply

comments

Related Articles

error: