ಮೈಸೂರು

ರಸ್ತೆ ಕಾಮಗಾರಿಯನ್ನು ಶೀಘ್ರ ಮುಗಿಸಲು ಸಂಸದ ಪ್ರತಾಪ್ ಸಿಂಹ ಸೂಚನೆ

ಕೊಡಗು ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ಮಂಗಳವಾರ ರಾಷ್ಟ್ರೀಯ ಹೆದ್ದಾರಿ 212ರ ಗೌರಿಶಂಕರ ನಗರ ಸಚ್ಚಿದಾನಂದ ಆಶ್ರಮ ಬಳಿಯ ನಂಜನಗೂಡು ಮಾರ್ಗದ ರಸ್ತೆಯನ್ನು  ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.

ಸಾರ್ವಜನಿಕರು ಸಂಸದರಿಗೆ ಈ ಹಿಂದೆಯೇ ರಸ್ತೆಯಲ್ಲಿ ಈಗಾಗಲೇ ಏಳು ಅಪಘಾತಗಳು ನಡೆದಿವೆ. ಅಪಘಾತವನ್ನು ತಡೆಯಲು ಶಾಶ್ವತ ಪರಿಹಾರವನ್ನು ಕಲ್ಪಿಸಿ ಎಂದು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸಂಸದರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ರಾಷ್ಟ್ರೀಯ ಹೆದ್ದಾರಿಗಳ ಯೋಜನೆ ರೂಪಿಸಲು 40ಕೋಟಿರೂ.ವೆಚ್ಚ ಮಾಡಿದೆ. ಆದರೆ ಇಲ್ಲಿ ಕಾಮಗಾರಿಗಳನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ ಎಂದರು. ಮೂರು ದಿನದಲ್ಲಿ ಸ್ಪೀಡ್ ಬ್ರೇಕರ್ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತಾತ್ಕಾಲಿಕವಾಗಿ ಬೀದಿ ದೀಪಗಳನ್ನ ಅಳವಡಿಸಿ, ನಂತರ ಶಾಶ್ವತವಾಗಿ ದೀಪ ಅಳವಡಿಕೆಗೆ ಸೂಚನೆ ನೀಡಲಾಗಿದೆ ಎಂದರು.

ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿಗಳಿಗೆ ಕೋಟಿ ಕೋಟಿ ಹಣ ಬಿಡುಗಡೆ ಮಾಡಿದ್ದರೂ, ಕಾಮಗಾರಿಯನ್ನು ಟೆಂಡರ್ ದಾರರು ಸರಿಯಾಗಿ ಮಾಡಿಲ್ಲ. ಎಲ್ಲವೂ ಬಾಕಿ ಉಳಿಸಿರುವಂತೆ ಕೆಲಸ ಮಾಡಿದ್ದಾರೆ. ಟೆಂಡರ್ ದಾರರಿಗೆ ಖಡಕ್ ಸೂಚನೆ ನೀಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಸಾರ್ವಜನಿಕರು ಎರಡು ಕಡೆ ಸರ್ವೀಸ್ ರಸ್ತೆ ಬೇಕು ಎಂದು ಹೇಳಿದ್ದಾರೆ ಈ ಕುರಿತು ಲೋಕೋಪಯೋಗಿ ಸಚಿವರ ಜೊತೆ ಮಾತನಾಡಲಾಗುವುದು. ರಸ್ತೆಯಲ್ಲಿ ಹಂಪ್ಸ್ ಅಳವಡಿಸಲು ತಿಳಿಸಿದ್ದೇನೆ. ಎಂದರಲ್ಲದೇ ಅಧಿಕಾರಿಗಳಿಗೂ ಕೂಡ ಕೆಲಸವನ್ನು ಶೀಘ್ರವಾಗಿ ಮುಗಿಸಬೇಕೆಂದು ಸೂಚಿಸಿದ್ದೇನೆ ಎಂದು ತಿಳಿಸಿದರು.

ನ್ಯಾಶನಲ್ ಹೈವೇ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನೀಯರ್ ಕೃಷ್ಣಮೂರ್ತಿ, ಬಿಜೆಪಿ ಮುಖಂಡರಾದ ಹೆಚ್.ವಿರಾಜೀವ್,  ರಾಜೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: