ಮೈಸೂರು

ಮನಪಾ ಸ್ಥಾಯಿ ಸಮಿತಿಗೆ ನಂದೀಶ್ ಪ್ರೀತಂ, ಸೀಮಾ ಪ್ರಸಾದ್ ಆಯ್ಕೆ

ಮೈಸೂರು ಮಹಾನಗರ ಪಾಲಿಕೆಯ 2 ಸ್ಥಾಯಿ ಸಮಿತಿಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ನಂದೀಶ್ ಪ್ರೀತಂ ಹಾಗೂ ಸೀಮಾ ಪ್ರಸಾದ್ ಅವಿರೋಧವಾಗಿ ಆಯ್ಕೆಯಾದರು.

ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ ಎಂ.ಜೆ.ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ಪಟ್ಟಣ ಮತ್ತು ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 21ನೇ ವಾರ್ಡಿನ ನಂದೀಶ್ ಪ್ರೀತಂ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 15ನೇ ವಾರ್ಡಿನ ಸೀಮಾ ಪ್ರಸಾದ್ ಅವಿರೋಧವಾಗಿ ಆಯ್ಕೆಯಾದರು.

ನಂದೀಶ್ ಪ್ರೀತಂ ಅವರಿಗೆ ಕೆಂಪಣ್ಣ ಸೂಚಕರಾದರೆ,  ಅನುಸೂಯ  ಅನುಮೋದಕರಾಗಿದ್ದರು. ಸೀಮಾ ಪ್ರಸಾದ್ ಅವರಿಗೆ ಫೈರೋಜ್ ಖಾನ್ ಸೂಚಕರಾದರೆ, ಸಂದೇಶ್ ಸ್ವಾಮಿ ಅನುಮೋದಕರಾಗಿದ್ದರು. ಎರಡೂ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಕೇವಲ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಇಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಎರಡೂ ಸಮಿತಿಗಳ ಎಲ್ಲ ಸದಸ್ಯರು ಚುನಾವಣೆಯಲ್ಲಿ ಹಾಜರಿದ್ದರು.

ಎಡಿಸಿ ರಾಜು, ಕೌನ್ಸಿಲ್ ಕಾರ್ಯದರ್ಶಿ ಸುಧಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: