ಕರ್ನಾಟಕ

ಭ್ರಷ್ಟಾಚಾರ ನಿರ್ಮೂಲನೆ ಕುರಿತು ಜಾಗೃತಿ

ಹಾಸನ (ಮಾ.11): ಚನ್ನರಾಯಪಟ್ಟಣ ತಾಲ್ಲೂಕಿನ ಡಿ.ಕಾಳೇನಹಳ್ಳಿ ಗ್ರಾಮಾ ಪಂಚಾಯಿತಿ ಕಚೇರಿಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಜನ ಸಂಪರ್ಕ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ನಿರ್ವಹಿಸುವಲ್ಲಿ ವಿಳಂಬ, ಲಂಚಕ್ಕಾಗಿ ಒತ್ತಾಯ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ, ನೌಕರರ ವಿರುದ್ಧ ನಮಗೆ ದೂರನ್ನು ನೀಡ ಬಹುದಾಗಿದೆ ಹಾಗೂ ಸಂಬಂದಪಟ್ಟ ಅಧಿಕಾರಿಯ ವಿರುದ್ಧ ಹಾಸನ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಗೆ ಭೇಟಿ ಮಾಡಿ ಅಧಿಕಾರಿಗಳ ಬಗ್ಗೆ ಮಾಹಿತಿಯನ್ನು ಒದಗಿಸಬಹುದಾಗಿದೆ.

ಸರ್ಕಾರಿ ನೌಕರರು ತನ್ನ ಆದಾಯಕ್ಕಿಂತ ಹೆಚ್ಚಿನ ಆಧಾಯ ಹೊಂದಿದ್ದರೆ, ಅಂಚೆ ಮೂಲಕ ನಮಗೆ ಅಕ್ರಮ ಆಸ್ತಿಯ ಬಗ್ಗೆ ತಿಳಿಸಬಹುದು ಎಂದು ಜಾಗೃತಿಯನ್ನು ಮೂಡಿಸಲಾಯಿತು. ಅಕ್ರಮ ಆಸ್ತಿಯ ಮಾಹಿತಿ ತಿಳಿಸಿದ ವ್ಯಕ್ತಿಯ ಹೆಸರನ್ನು ನಾವು ಬಹಿರಂಗಪಡಿಸುವುದಿಲ್ಲ ಎಂದು ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸುವ ಮೂಲಕ ಮನವರಿಕೆ ಮಾಡಿ ಸಭೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಹಾಸನ ಎಸಿಬಿ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಪೂರ್ಣಚಂದ್ರತೇಜಸ್ವಿ, ಪೊಲೀಸ್ ನಿರೀಕ್ಷಕರಾದ ಜಗದೀಶ್.ಸಿ.ಡಿ ರವರು ಸಿಬ್ಬಂದಿಗಳೊಂದಿಗೆ ಹಾಜರಿದ್ದು ಸಭೆ ನಡೆಸಲಾಯಿತು. (ಎನ್.ಬಿ)

Leave a Reply

comments

Related Articles

error: