ಮೈಸೂರು

ನಗದು ಕೂಪನ್ ಬೇಡ ಧಾನ್ಯ ನೀಡಿ : ಪ್ರತಿಭಟನೆ

ರಾಜ್ಯ ಸರ್ಕಾರ ಧಾನ್ಯದ ಬದಲು ನಗದು ಕೂಪನ್ ನೀಡುವುದರ ಮೂಲಕ ಜನರ ಆಹಾರದ ಹಕ್ಕು, ಕಾರ್ಮಿಕರ ಉದ್ಯೋಗದ ಹಕ್ಕು ಕಿತ್ತುಕೊಳ್ಳಲು ಹೊರಟಿದೆ ಎಂದು ಆರೋಪಿಸಿ ಕರ್ನಾಟಕ ಶ್ರಮಿಕ ಶಕ್ತಿ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಎದುರು ನಡೆದ  ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಸಿದ್ದರಾಮಯ್ಯನವೆ ನೇತೃತ್ವದ ಕಾಂಗ್ರೆಸ್ ಸರ್ಕಾರ  ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕರ್ನಾಟಕವನ್ನು ಹಸಿವು ಮುಕ್ತ ಕರ್ನಾಟಕವನ್ನಾಗಿ ಮಾಡುವ ಉದ್ದೇಶ ಪ್ರಕಟಿಸಿ ಪಡಿತರ ಯೋಜನೆಗೆ ಅನ್ನಭಾಗ್ಯ ಯೋಜನೆ ಎಂದು ಹೆಸರಿಟ್ಟರು. ಆರಂಭದಲ್ಲಿ ಪ್ರತಿ ಕುಟುಂಬಕ್ಕೆ 30ಕೆಜಿ ಅಕ್ಕಿ ಕೊಡುವ ಯೋಜನೆಯನ್ನು ಜಾರಿಗೆ ತಂದರು. ಬಳಿಕ ಹಿಂದಿನಂತೆ ಯೂನಿಟ್ ಪದ್ಧತಿಯನ್ನು ಜಾರಿಗೆ ತಂದು ಪ್ರತಿ ವ್ಯಕ್ತಿಗೆ ತಲಾ 5ಕೆಜಿಯಂತೆ ಅಕ್ಕಿ,ಗೋಧಿ,ರಾಗಿಯನ್ನು ನೀಡಲು ಆರಂಭಿಸಿದ್ದಾರೆ ಎಂದು ಆರೋಪಿಸಿದರು.

ಇವೆಲ್ಲದರ ನಡುವೆ ಈಗ ಕೊಡುವ 5ಕೆಜಿ ಧಾನ್ಯಕ್ಕೂ ಕಲ್ಲು ಬೀಳುವ ಸ್ಥಿತಿ ಬಂದಿದೆ. ನಗದು ಕೂಪನ್ ನಿಂದ ಬಡ ಕುಟುಂಬಕ್ಕೆ ತೊಂದರೆಗಳುಂಟಾಗುವ ಸಾಧ್ಯತೆಯೇ ಹೆಚ್ಚು. ಇದರಿಂದ ನಗದು ಕೂಪನ್ ಬೇಡ ಧಾನ್ಯವನ್ನೇ ನೀಡಿ ಎಂದು ಒತ್ತಾಯಿಸಿದರಲ್ಲದೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ನೂರಾರು ಸದಸ್ಯರು ಪಾಲ್ಗೊಂಡಿದ್ದರು.

Leave a Reply

comments

Related Articles

error: