ಮೈಸೂರು

ಜ.26 : ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಬಿರ

ಮಹಾತ್ಮ ಗಾಂಧಿ ಟ್ರಸ್ಟ್, ಜಿ.ಟಿ.ಡಿ.ಫೌಂಡೇಶನ್ ಮತ್ತು ಪ್ರಶಾಂತನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂ‍ಘ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಬನಶಂಕರಿ ಡಯಾಗ್ನೋಸ್ಟಿಕ್ಸ್ ಸೆಂಟರ್ ನ ಸಹಕಾರದೊಂದಿಗೆ 68 ನೇ ಗಣರಾಜ್ಯೋತ್ಸವ ದಿನದ ಅಂಗವಾಗಿ ಜ.26 ರಂದು ಬೋಗಾದಿಯ ಸಂಗಂ ಭಂಡಾರ್ ಸರ್ಕಲ್ ನಲ್ಲಿ ಬೆಳಿಗ್ಗೆ 7.30 ರಿಂದ 9 ಗಂಟೆಯವರೆಗೆ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾತ್ಮ ಗಾಂಧಿ ಟ್ರಸ್ಟ್ ನ ಅಧ‍್ಯಕ್ಷ ಪುನೀತ್ ಹೇಳಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಶ್ರೀ ಆದಿಚುಂನಗಿರಿ ಮಠದ ಮುಖ‍್ಯಸ್ಥರಾದ ಸೋಮೇಶ್ವರನಾಥ ಸ್ವಾಮೀಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಜಿ.ಟಿ.ದೇವೇಗೌಡ ಕಾರ್ಯಕ್ರಮದ ಅಧ‍್ಯಕ್ಷತೆ ವಹಿಸಲಿದ್ದಾರೆ. ಮೈಸೂರು ವಿವಿ ವಿಶ್ರಾಂತ ಕುಲಪತಿ ಕೆ.ಎಸ್.ರಂಗಪ್ಪನವರನ್ನು ಈ ಸಂದರ್ಭ  ಸನ್ಮಾನಿಸಲಾಗುತ್ತದೆ ಎಂದರು.  ಎಂ.ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕ ಜಿ.ಡಿ.ಹರೀಶ್ ಗೌಡ ಶಿಬಿರಕ್ಕೆ ಚಾಲನೆ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಕೆ.ಎ.ಎಸ್ ಅಧಿಕಾರಿ ಪಿ.ಸಿ.ಜಯಣ್ಣ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ‍್ಯಕ್ಷ ಕೆ. ಮಾದೇಶ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನ ಪದಾಧಿಕಾರಿ ಅಶೋಕ್,  ಜೆ.ಡಿ.ಎಸ್ ಮುಖಂಡ ಕುಮಾರ್, ಬನಶಂಕರಿ ಡಯಾಗ್ನೋಸ್ಟಿಕ್ಸ್ ಸೆಂಟರ್ ನ ಮಾಲೀಕ ಸಂದೀಪ್ ಹಾಜರಿದ್ದರು.

Leave a Reply

comments

Related Articles

error: