ಪ್ರಮುಖ ಸುದ್ದಿ

ಚಿತ್ರನಟರಾದ ದಿವಂಗತ ಅಂಬರೀಶ್ ಹಾಗೂ ಕಾಶೀನಾಥ್ ರವರ ನೆನಪು- ನಮನ ಕಾರ್ಯಕ್ರಮ

ರಾಜ್ಯ(ಬೆಂಗಳೂರು)ಮಾ.11: – ಅರವಿಂದ ಕಲಾವೃಂದದಿಂದ   ಬೆಂಗಳೂರು ಪಂಪ ಬಯಲು ರಂಗ ಮಂದಿರದಲ್ಲಿ ವೈವಿಧ್ಯ ಗೀತೋತ್ಸವ ಹಾಗೂ ಚಿತ್ರನಟರಾದ ದಿವಂಗತ ಅಂಬರೀಶ್ ಹಾಗೂ ಕಾಶೀನಾಥ್ ರವರ ನೆನಪು- ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಹೆಸರಾಂತ ಚಲನಚಿತ್ರ ನಟರು ಹಾಗೂ ಗಾಯಕರಿಂದ ಅವರ ನೆನಪಿನ ಬುತ್ತಿ ಬಿತ್ತಿದರು.

ಕಾರ್ಯಕ್ರಮ ಉದ್ಘಾಟನೆ ಬೆಂಗಳೂರು ನಗರ ಸಾಹಿತ್ಯ ಪರಿಷತ್ ಅಧ್ಯಕ್ಷರಾದ   ಮಾಯಣ್ಣನವರು ನಡೆಸಿಕೊಟ್ಟರು. ಇವರೊಂದಿಗೆ ಚಿತ್ರನಟ ಅಭಿನಯ, ವಿ. ಮನೋಹರ್, ಶಂಖನಾದ ಅರವಿಂದ್, ಮಾನಸ ಹೊಳ್ಳ, ಡಿಂಗ್ರಿನಾಗರಾಜ್, ಡಾ. ಕೆ.ಸಿ. ಬಲ್ಲಾಳ್ ಮುಂತಾದವರು ಭಾಗವಹಿಸಿದ್ದರು.

ಚಲನಚಿತ್ರ ವಾಣಿಜ್ಯ ಮಂಡಳಿಯ ಗೌ.ಕಾರ್ಯದರ್ಶಿ ಭಾ.ಮಾ. ಹgರೀಶ್ ರವರು ಸ್ವತಃ ಕಲಾವಿದರಾಗಿ ಕಲಾವೃಂದದಿಂದ ಅಂಬರೀಶ್ ಹಾಗೂ ಕಾಶೀನಾತ್ ರವರ ನೆನಪು-ನಮನ ಕಾರ್ಯಕ್ರಮದ ಬಗ್ಗೆ ಅಭಿನಂದಿಸಿದರು. ಮಾನಸ ಹೊಳ್ಳ ಅನುಭವ ಚಿತ್ರದ ಹಾಡು (ಹೋದೆಯ ದೂರ) ಹೇಳುತ್ತಿರುವಾಗ ವೇದಿಕೆಯಲ್ಲಿ ಅಭಿನಯ ಕಣ್ಣೀರಧಾರೆ ಎರೆದರು. ಅವರು, ಮಾತನಾಡಲಾಗದೆ ಗದ್ಗದಿತರಾದರು.

ವಿ. ಮನೋಹರ್‍ ಅವರು ಕಾಶೀನಾಥ್‍ ರವರು ಮಾಡಿದ ಕೆಲಸ ನೆನಪಿಸುತ್ತ, ಕಲಾವಿದರನ್ನು ತಂತ್ರಜ್ಞರನ್ನು ಚಲನಚಿತ್ರ ಕ್ಷೇತ್ರಕ್ಕೆ ತಂದಿರುವುದನ್ನು ಅವಿಸ್ಮರಣೀಯ ಹೇಳಿದ್ದನ್ನು ಮಾಡಿತೋರಿಸಿದವರಲ್ಲಿ ಕಾಶೀನಾಥ್‍ರವರು ಒಬ್ಬರಾಗಿದ್ದಾರೆ ಎಂದರು. ಶಂಖನಾದ ಅರವಿಂದ್ ವೈವಿಧ್ಯ ಗೀತೋತ್ಸವ ಜೊತೆಯಲ್ಲಿ ಕಾಶೀನಾಥ್ ಹಾಗೂ ಅಂಬರೀಶ್ ಇಬ್ಬರೊಡನೆ ಅಭಿನಯಿಸಿದ್ದು, ಚಿತ್ರರಂಗದಿಂದ ಕಾಶೀನಾಥ್‍ರ ಪರಿಚಯವಾಗಿ ಹೆಸರು ಮಾಡಿದ್ದು ಸ್ಮರಿಸಿಕೊಂಡರು. ಕಾಶೀನಾಥ್  ಅವರ ಮಗ -ದುಃಖ ತಡೆಯಲಾಗದೆ ವೇದಿಕೆಗೆ ಬರಲು ಸಾಧ್ಯವಿಲ್ಲವೆಂದಾಗ ವಿ. ಮನೋಹರ್ ಸಮಾಧಾನ ಮಾಡಿ, ಅವರ ಬಗ್ಗೆ ಮಾತನಾಡಿದರು.

ತಣ್ಣನೆಯ ವಾತಾವರಣದಲ್ಲಿ ಮಧುರಗಾಯನದಲ್ಲಿ, ಜನಪರ ಗಾಯಕ ಕಡಬಗೆರೆ ಮುನಿರಾಜು ಕತ್ತಲಲ್ಲಿ ಚಿತ್ರಲಾದ ಚಂದ್ರಮ ಹಾಡಿಗೆ ಚಪ್ಪಾಳೆ ಸುರಿಮಳೆಯಾಯಿತು. ಈ ಕಾರ್ಯಕ್ರಮದಲ್ಲಿ ಮಲ್ನಾಡ್ ಸೋದರಿಯರಾದ ಮಾನಸ ಹೊಳ್ಳ ಪ್ರಾರ್ಥನಾ ಕಿರಣ್ ಇವರೊಂದಿಗೆ ಖ್ಯಾತ ಗಾಯಕರಾದ ಮೋಹನ್ ಕೃಷ್ಣ, ರೇಖಾ ಸೌದಿ (ಬೀದರ್) ಡಾ. ಹೇಮಾ ಪ್ರಸಾದ್, ರೇಷ್ಮಾ ಲೋಕೇಶ್, ತುಮಕೂರು ಮಂಜು, ರವಿ ಸಂತೋಷ್, ರಮಾ ಅರವಿಂದ್, ಸೃಷ್ಠಿ ದಿವ್ಯಾ (ನೃತ್ಯ) ಮುಂತಾದವರು ಕಾರ್ಯಕ್ರಮಕ್ಕೆ ಕಳೆಕಟ್ಟಿದರು. ಸೃಷ್ಠಿ ಉಮೇಶ್ ತಂಡ ಹಾಗೂ ಪ್ರಾರ್ಥನಾ (ಚೀಪ್‍ಗಿಟಾರ್) ಅಭಿಷೇಕ್ ರಿದಂ ಹಿಮ್ಮೇಳನದಲ್ಲಿ ಮಿಂಚಿದರು.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: