ಪ್ರಮುಖ ಸುದ್ದಿ

ಬಿಸಿಲಿನ ಬೇಗೆಗೆ ಬಸವಳಿದ ಕೊಡಗಿನ ಜನತೆಗೆ ತಂಪೆರೆದ ಮಳೆ

ರಾಜ್ಯ(ಮಡಿಕೇರಿ) ಮಾ.12 :- ಬಿಸಿಲ ಬೇಗೆಯಿಂದ ಬಿಸಿಯಾಗಿದ್ದ ಕಾವೇರಿ ನಾಡು ಕೊಡಗು ನಿನ್ನೆ ಸುರಿದ ಉತ್ತಮ ಮಳೆಗೆ ತಂಪಾಗಿದೆ.
ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು, ಮದೆನಾಡು, ಬೆಟ್ಟಗೇರಿ ಸೇರಿದಂತೆ ಮಡಿಕೇರಿ ನಗರದಲ್ಲೂ ಉತ್ತಮ ಮಳೆಯಾಗಿದೆ. ಸೋಮವಾರ ನಸುಕು 4.30 ಗಂಟೆಯ ಸುಮಾರಿಗೆ ಮತ್ತು ಸಂಜೆ ಇದೇ ಸಮಯಯಕ್ಕೆ ಗುಡುಗು ಸಹಿತ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಈ ಬಾರಿ ಜನವರಿಯಿಂದ ಇಲ್ಲಿಯವರೆಗೆ ಕಡಿಮೆ ಮಳೆಯಾಗಿದೆ. ವಾಡಿಕೆ ಮಳೆ ಬೀಳದ ಕಾರಣ ಕೆಲವು ಗ್ರಾಮಗಳ ಪ್ರಮುಖರು ಇತ್ತೀಚೆಗೆ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದ್ದರು. ಇಂದು ಸುರಿದ ಉತ್ತಮ ಮಳೆ ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: