ಮೈಸೂರು

ಜ.29 : ರಮಾ ಗೋವಿಂದ ಪುರಸ್ಕಾರ ಪ್ರದಾನ

ರಾಷ್ಟ್ರೀಯ ಮಟ್ಟದಲ್ಲಿ ಸಮಾಜ ಸೇವೆಯಲ್ಲಿ ಮತ್ತು ಭಾರತೀಯ ಸಂಸ್ಕೃತಿಯ ಆಳವಾದ ಅಧ್ಯಯನ ಮಾಡಿ ತಮ್ಮ ವಿಶೇಷ ಚಿಂತನೆಗಳಿಂದ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಕೆಲಸ ಮಾಡುತ್ತಿರುವ ಸಂಸ್ಥೆ ಮತ್ತು ವ್ಯಕ್ತಿಗಳನ್ನು ಗುರುತಿಸಿ  ಡಿ.ರಮಾಬಾಯಿ ಚಾರಿಟೇಬಲ್ ಫೌಂಡೇಶನ್ ಮತ್ತು ಎಂ.ಗೋಪಿನಾಥ್ ಶೆಣೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷ ನೀಡಲಾಗುವ ‘ರಮಾಗೋವಿಂದ ಪುರಸ್ಕಾರ’ ಪ್ರದಾನ ಸಮಾರಂಭವನ್ನು  ಈ ಬಾರಿ ಮೈಸೂರಿನ ಕಲಾಮಂದಿರದಲ್ಲಿ ಜ.29 ರಂದು ಸಂಜೆ 6.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಪದಾಧಿಕಾರಿ ಎಂ.ಜಗನ್ನಾಥ ಶೆಣೈ ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಮಹಾರಾಷ್ಟ್ರದ ದಟ್ಟ ಕಾಡಿನ ಮಧ‍್ಯೆ 42 ವರ್ಷಗಳಿಂದ ‘ಮಾಡಿಯಾ ಗೋಂಡ್’ ಎಂಬ ಆದಿವಾಸಿಗಳಿಗಾಗಿ, ಅವರ ಶಿಕ್ಷಣ ಮತ್ತು ಆರೋಗ್ಯ, ಜೊತೆ ಜೊತೆಗೆ ಅನಾಥವಾಗಿರುವ ಕಾಡಿನ ಎಲ್ಲಾ ಪ್ರಾಣಿ ಸಂಕುಲಕ್ಕಾಗಿ ನಿರಂತರ ಕೆಲಸ ಮಾಡುತ್ತಿರುವ ಬಾಬಾ ಆಮ್ಟೆ ಅವರ ಮಗ ಮತ್ತು ಸೊಸೆ ಡಾ.ಪ್ರಕಾಶ್ ಆಮ್ಟೆ ಮತ್ತು ಡಾ.ಮಂದಾಕಿನಿ ಆಮ್ಟೆ ಅವರಿಗೆ ಮಹಾರೋಗಿ ಸೇವಾಸಮಿತಿ, ವರೋರ ಇದರ ಪರವಾಗಿ, ಹಾಗೂ  ಮಣಿಪಾಲದಲ್ಲಿ ಹಸ್ತ ಶಿಲ್ಪ ಟ್ರಸ್ಟ್ ಮುಖಾಂತರ ಹೆರಿಟೇಜ್ ವಿಲೇಜ್ ನಿರ್ಮಾಣದ ಮೂಲಕ ಸಾಂಪ್ರದಾಯಿಕ ವಾಸ್ತು ಸೌಂದರ್ಯವನ್ನು ರಕ್ಷಿಸುತ್ತಿರುವ ಡಾ ವಿಜಯನಾಥ ಶೆಣೈ ಅವರಿಗೆ ಹಸ್ತಶಿಲ್ಪ ಸಂಸ್ಥೆಯ ಪರವಾಗಿ ಪುರಸ್ಕಾರ ನೀಡಲಾಗುತ್ತದೆ. ಪ್ರಶಸ್ತಿ ಪುರಸ್ಕಾರದೊಂದಿಗೆ ಸಂಸ್ಥೆಗೆ 5 ಲಕ್ಷ ನಗದು, ಮತ್ತು ವ್ಯಕ್ತಿಗಳಿಗೆ 3 ಲಕ್ಷ ನಗದು ನೀಡಲಾಗುವುದು ಎಂದು ಹೇಳಿದರು.

ನಂತರ ಸಂಜೆ 7 ಗಂಟೆಗೆ ಹೈದರಾಬಾದಿನ 131 ವರ್ಷ ಪೂರೈಸಿರುವ ‘ಸುರಭಿ’ ನಾಟಕ ತಂಡದಿಂದ ಪ್ರಸಿದ್ಧ ‘ಮಾಯಾ ಬಜಾರ್’ ನಾಟಕ ಪ್ರದರ್ಶನವಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನ ಪದಾಧಿಕಾರಿಗಳಾದ ಎಂ.ಗೋಪಿನಾಥ ಶೆಣೈ, ಜಯರಾಮ ಪಾಟೀಲ, ರಂಗಕರ್ಮಿ ರಾಜಶೇಖರ ಕದಂಬ ಹಾಜರಿದ್ದರು.

Leave a Reply

comments

Related Articles

error: