ಮೈಸೂರು

ಜ.26 : ಉಚಿತ ರಕ್ತದಾನ ಶಿಬಿರ

ಜೀನಿಯಸ್ ಫ್ರೆಂಡ್ಸ್ ಅಸೋಸಿಯೇಷನ್ ಹಾಗೂ ಮೈಸೂರು ಎಲೈಟ್ ರೌಂಡ್ ಟೇಬಲ್ -256 ಇವರ ಸಹಯೋಗದಲ್ಲಿ 68 ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜ.26 ರಂದು ಬೆಳಿಗ್ಗೆ 9 ಗಂಟೆಗೆ ನ್ಯೂ ಸಯ್ಯಾಜಿರಾವ್ ರಸ್ತೆಯ ಮೆಡಿವೇವ್ ಸಭಾಂಗಣದಲ್ಲಿ ಉಚಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು  ಜೀನಿಯಸ್ ಫ್ರೆಂಡ್ಸ್ ಅಸೋಸಿಯೇಷನ್ ನ ಅಧ‍್ಯಕ್ಷ ಡಾ.ಸಿ.ಶರತ್ ಕುಮಾರ್ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಿಗ್ಗೆ 9 ಗಂಟೆಗೆ ಡಾ. ಶರತ್ ಕುಮಾರ್ ಧ್ವಜಾರೋಹಣ ಮಾಡಲಿದ್ದಾರೆ. ಮತ್ತು ರಕ್ತದಾನ ಮಹತ್ವ ಕುರಿತು ತಿಳಿಸಿಕೊಡಲಿದ್ದಾರೆ. ಮಹಾನಗರ ಪಾಲಿಕೆ ಸದಸ್ಯ ಸಿ.ರಮೇಶ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮೈಸೂರು ವಿವಿ ಕುಲಸಚಿವ ಪ್ರೊ.ಜೆ.ಸೋಮಶೇಖರ್, ಮೈಸೂರು ಕ್ಲಿನಿಕಲ್ ಸೊಸೈಟಿಯ ಗೌರವ ಕಾರ್ಯದರ್ಶಿ ಡಾ.ಎಂ.ಜಿ.ಆರ್.ಅರಸ್, ಜ್ಞಾನ ಬುತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಮೈಸೂರು ಎಲೈಟ್ ರೌಂಡ್ ಟೇಬಲ್-256 ನ ಅಧ‍್ಯಕ್ಷ ಪಿ.ಕೆ.ಸುರೇಶ್, ಜೀನಿಯಸ್ ಫ್ರೆಂಡ್ಸ್ ಅಸೋಸಿಯೇಷನ್ ನ ಸಂಸ್ಥಾಪಕ ಡಾ.ಸಿ.ಎನ್.ರವಿಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ   ಸುರೇಶ್, ಡಾ.ಎಂ.ಜಿ.ಆರ್.ಅರಸ್, ಸುರಭಾ, ಮಾಲಿನಿ ಮತ್ತು ದಾಮೋದರ್ ಹಾಜರಿದ್ದರು.

Leave a Reply

comments

Related Articles

error: