ಮೈಸೂರು

ಮಾ.15 : ಗಾನಭಾರತಿಯಲ್ಲಿ ಟಿ ವಿ ರಾಂ ಪ್ರಸಾದ್‍ ಗಾಯನ

ಮೈಸೂರು,ಮಾ.12:- ಕುವೆಂಪುನಗರದಲ್ಲಿರುವ ಗಾನಭಾರತೀಯಲ್ಲಿ ಮಾರ್ಚ್  15ರಂದು ಸಂಜೆ 6 ಗಂಟೆಗೆ ವಿದ್ವಾನ್ ಟಿ ವಿ ರಾಂಪ್ರಸಾದ್‍ ಅವರ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಶ್ರೀ ದೇಸಿರಾಜು ಸಂಸ್ಮರಣೆಯಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ವಿದುಷಿ ಕಲ್ಪನ ವೆಂಕಟ್‍ ಅವರು ವಯೋಲಿನ್ ನಲ್ಲಿ, ವಿದ್ವಾನ್‍ ಕಲ್ಕತ್ತ ಅರವಿಂದ್‍ ಅವರು ಮೃದಂಗದಲ್ಲಿ ಮತ್ತು ವಿದ್ವಾನ್ ಭಾರ್ಗವ ಹಾಲಂಬಿ ಅವರು ಖಂಜಿರದಲ್ಲಿ ಸಹಕರಿಸಲಿದ್ದಾರೆ.

ಪ್ರಸಿದ್ಧ ಗಾಯಕ ವಿದ್ವಾನ್ ಟಿ ವಿ ರಾಂಪ್ರಸಾದ್‍ ಅವರು ಮಹಾಲಕ್ಷ್ಮೀ ನಟರಾಜನ್ ಹಾಗೂ ಶಾರದ ಸತ್ಯನಾರಾಯಣ ಅವರ ಬಳಿ ಸಂಗೀತಾಭ್ಯಾಸ ಪ್ರಾರಂಭಿಸಿ ಅನಂತರ ವಿದ್ವಾನ್ ಪಿ ಎಸ್ ನಾರಾಯಣಸ್ವಾಮಿ, ಎಸ್‍ರಾಜಂ, ಟಿ ವಿ ಗೋಪಾಲಕೃಷ್ಣನ್‍ ಅವರ ಬಳಿ ಕಲಿತರು. 11ನೇ ವಯಸ್ಸಿನಿಂದಲೇ ಕಾರ್ಯಕ್ರಮ ನೀಡಲು ಪ್ರಾರಂಭಿಸಿದ ಇವರು ಅಮೆರಿಕಾ, ಜರ್ಮನಿ, ಫ್ರಾನ್ಸ್, ಸಿಂಗಪುರ್ ಹೀಗೆ ಹಲವಾರು ದೇಶಗಳಲ್ಲಿ ಕಳೆದ 38 ವರ್ಷಗಳಿಂದ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ. ಇವರು ಆಕಾಶವಾಣಿಯ ‘ಎ’ ದರ್ಜೆ ಕಲಾವಿದರು. ಅಧ್ಯಾಪಕರಾಗಿಯೂ ಹಲವು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಇ ಅಂಬಲಂ ಎಂಬ ಜಗತ್ತಿನ ಮೊದಲ ಆನ್‍ಲೈನ್‍ ಕಾಲೇಜನ್ನು ಪ್ರಾರಂಭಿಸಿದ್ದಾರೆ. ಇವರಿಗೆ ಕಂಚಿ ಕಾಮಕೋಟಿ ಪೀಠಂ ಆಸ್ಥಾನ ವಿದ್ವಾನ್, ಗಾನಕಲಾಶ್ರೀ, ನಾದವಲ್ಲಭ, ಗಾಯನ ಗಂಧರ್ವ, ಮ್ಯೂಸಿಕ್ ಅಕಾಡೆಮಿಯಲ್ಲಿ ಅತ್ಯುತ್ತಮ ಗಾಯಕ ಪ್ರಶಸ್ತಿ ಮುಂತಾದವು ಲಭಿಸಿವೆ.

ವಿದುಷಿ ಕಲ್ಪನಾ ವೆಂಕಟ್‍ ಅವರು ಗಾಯನ ಹಾಗೂ ಪಿಟೀಲಿನಲ್ಲಿ ನುರಿತ ಕಲಾವಿದೆ. ವಿದುಷಿ ಟಿ ರುಕ್ಮಿಣಿಯವರಲ್ಲಿ ಪಿಟೀಲು ಕಲಿತಿರುವ ಇವರು ಡಾ.ಎಂ ಬಾಲಮುರಳಿಕೃಷ್ಣ, ವಿದ್ವಾನ್‍ ರಮಣಿ ಮೊದಲಾದ ಹಲವು ಹಿರಿಯ ಸಂಗೀತಗಾರರಿಗೆ ಪಕ್ಕವಾದ್ಯ ಸಹಕಾರ ನೀಡಿದ್ದಾರೆ.

ವಿದ್ವಾನ್‍ ಕಲ್ಕತ್ತಾ ಎಸ್‍ .ಅರವಿಂದ್‍ ಅವರು ವಿದ್ವಾನ್‍ ಕಲ್ಕತ್ತಾ ಶೇಖರ್ ಹಾಗೂ ವಿದ್ವಾನ್‍ ಕಾರೈಕುಡಿ ಆರ್ ಮಣಿಯವರಲ್ಲಿ ಕಲಿತಿದ್ದಾರೆ. ಹಲವಾರು ಪ್ರಮುಖ ಕಲಾವಿದರಿಗೆ ಮೃದಂಗ ಸಹಕಾರ ನೀಡಿದ್ದಾರೆ. ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ವಿದ್ವಾನ್ ಭಾರ್ಗವ ಹಾಲಂಬಿಯವರು ಉಳ್ಳೂರು ನಾಗೇಂದ್ರ ಉಡುಪ, ಅನಂತರ   ಕೆ ಯು.ಜಯಚಂದ್ರ.ರಾವ್‍.ಅವರಲ್ಲಿ ಖಂಜಿರಾ ಕಲಿತು, ಈಗ ವಿದ್ವಾನ್ ಸಿ ಪಿ ವ್ಯಾಸವಿಠ್ಠಲ ಅವರಲ್ಲಿ ಕಲಿಕೆ ಮುಂದುವರಿಸುತ್ತಿದ್ದಾರೆ. ಹಲವು ಹಿರಿಯ ಕಲಾವಿದರಿಗೆ ಖಂಜಿರ ನುಡಿಸಿ, ಮೆಚ್ಚುಗೆಗೆ ಪಾತ್ರವಾಗಿದ್ದಾರೆ. (ಎಸ್.ಎಚ್)

 

Leave a Reply

comments

Related Articles

error: